ಶಿಕ್ಷಕರು ಸಾತ್ವಿಕ ಸಮಾಜದ ಸೃಷ್ಠಿಕರ್ತರು

5BK2_A
Published on

ಬಸವಕಲ್ಯಾಣ: ಅಧ್ಯಯನ ಶಿಕ್ಷಕನ ಉಸಿರಾದರೆ ಶಿಕ್ಷಣ ಹಸಿರು. ಶಿಕ್ಷಕ ಅಧ್ಯಯನಶೀಲನಾಗಿ ನಡೆದಾಡುವ ಗ್ರಂಥಾಲಯವಾಗಬೇಕು. ಚಾರಿತ್ರö್ಯ ಸಂಪನ್ನತೆ, ಸದಾ ಪ್ರಸನ್ನತೆ, ಮಾನವೀಯ ಮೌಲ್ಯಗಳು ಶಿಕ್ಷಕನ ಆಭರಣಗಳು. ಗುರುಪರಂಪರೆಯ ವಾರಸುದಾರರಾದ ಶಿಕ್ಷಕರು ಸಾತ್ವಿಕ ಸಮಾಜದ ಸೃಷ್ಟಿಕರ್ತರು ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿಯಿಂದ ನಗರದ ರಥ ಮೈದಾನದಲ್ಲಿಯ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ೬೨ನೇ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕ ಮನಸ್ಸು ಮಾಡಿದರೆ ತತ್ವ ಜ್ಞಾನಿ, ಮೇಧಾವಿ, ತಜ್ಞ, ಆಡಳಿತಗಾರನಾಗಿ ಅತ್ಯುನ್ನತ ಸ್ಥಾನ ಪಡೆಯುತ್ತಾನೆ ಎಂದರು. ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದಿಂದ ವಂಚಿತ ತಳ ಸಮುದಾಯದ ಉನ್ನತಿಗೆ ನಿಸ್ವಾರ್ಥ ಸೇವೆ ಮಾಡಿರುವ ಸಾವಿತ್ರಿಬಾಯಿ ಫುಲೆ ನಾರಿ ಶಕ್ತಿಯ ಚೈತನ್ಯ ಶೀಲ ಪ್ರವಾಹ ಎಂದರು.
ಸಮಿತಿ ಅಧ್ಯಕ್ಷ, ಶಾಸಕ ಶರಣು ಸಲಗರ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನನ್ನ ವೃತ್ತಿ ಜೀವನ ಆರಂಭಿಸಿರುವ ನನಗೆ ಶಾಸಕನಾಗಿ ವೇದಿಕೆ ಮೇಲೆ ಕುಳಿತುಕೊಳ್ಳಲುವ ಅವಕಾಶ ಸಿಕ್ಕಿರುವುದು ಸೌಭಾಗ್ಯವೇ ಸರಿ. ತಾಲೂಕಿನಲ್ಲಿ ಆದರ್ಶ ಶಿಕ್ಷಕರಿದ್ದು, ಈ ನೆಲದ ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮಲಿ ಎಂದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಡಿಡಿಪಿಐ ಸಲೀಂ ಪಾಶಾ ಮಾತನಾಡಿದರು. ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ಧಬಾಲೆ ವಿಶೇಷ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ ಹಳ್ಳದ ಸ್ವಾಗತಿಸಿದರು.
ನಿವೃತ್ತ ಶಿಕ್ಷಕರು, ಉತ್ತಮ ಫಲಿತಾಂಶ ಪಡೆದ ಶಾಲೆಗಳ ಮುಖ್ಯಗುರುಗಳು, ೧ನೇ ತಗರಿಯಲ್ಲಿ ಹೆಚ್ಚು ದಾಖಲಾತಿ ಆಗಿರುವ ಶಾಲೆ ಮುಖ್ಯಗುರುಗಳನ್ನು ಸನ್ಮಾನಿಸಲಾಯಿತು.
ಬಿಕೆಡಿಬಿ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ ಶಾಂತಗೌಡ ಬಿರಾದಾರ, ಇಓ ಮಹಾದೇವ ಬಾಬಳಗೆ, ಅಕ್ಷರ ದಾಸೋಹ ಇಲಾಖೆಯ ಇಡಿ ಮಹಿಪಾಲ ರೆಡ್ಡಿ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ, ಬಿಸಿಎಂ ಅಧಿಕಾರಿ ಹಿರೇಗೌಡರ, ಸರ್ಕಾರಿ ನೌಕರರ ಹಾಗೂ ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷರು ಮತ್ತು ಪ್ರಮುಖರಾದ ಮಲ್ಲಿಕಾರ್ಜುನ ಮೇತ್ರೆ, ಚಂದ್ರಕಾAತ ಕಿವಡೆ, ಯೋಗರಾಜ ಕೆ, ಸಂತೋಷಕುಮಾರ ಅಕ್ಕಣ್ಣಾ, ಅಂಬಣ್ಣಾ ಗಾಂಗ್ರೆ, ತುಕಾರಾಮ ರೊಡ್ಡೆ, ಅಶೋಕ ರಾಯಪಳ್ಳೆ, ಶ್ರೀದೇವಿ ಚಿರಡೆ, ಪ್ರಕಾಶ ದಾಡಗೆ, ಸುಧಾಕರ ಮೂಳೆ, ಲಕ್ಷö್ಮಣ ಹೆಂಬಾಡೆ, ರಾಜಕುಮಾರ ಬಿರಾದಾರ, ರಮೇಶ ಉಮ್ಮಾಪುರೆ, ರೋಹಿದಾಸ ಮಾಲೆ ಇತರರಿದ್ದರು.
ಮಾರುತಿ ಪೂಜಾರಿ, ರಾಜಶ್ರೀ ಸ್ವಾಮಿ ಸಂಗಡಿಗರು ಪ್ರಾರ್ಥಿಸಿದರು. ಬೇಟಬಾಲಕುಂದಾ ಎಂಡಿಆರ್ ಶಾಲೆ ವಿದ್ಯಾರ್ಥಿಗಳಿಂದ ನಾಡಗೀತೆ ಜರುಗಿತು. ಶಿವಕುಮಾರ ಜಡಗೆ ಹಾಗೂ ರಮೇಶ ರಾಜೋಳೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net