ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕೆ ಮುಂದಾಗಬೇಕು: ಕೆ ಎಸ್ ಲಿಂಗೇಶ್

ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕೆ ಮುಂದಾಗಬೇಕು: ಕೆ ಎಸ್ ಲಿಂಗೇಶ್
Published on

ಬೇಲೂರು: ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯಾಗಿದ್ದು, ಈ ಬಗ್ಗೆ ಎಲ್ಲ ಶಾಲಾ ಶಿಕ್ಷಕರು ಗಮನ ಹರಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕೆ ಮುಂದಾಗಬೇಕು ಶಾಸಕ ಕೆ ಎಸ್ ಲಿಂಗೇಶ್ ಹೇಳಿದರು.


ಪಟ್ಟಣದ ಪೂರ್ಣ ಪ್ರಜ್ಞಾ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೇಲೂರು, ತಿಂಗಳ ಗುರಿ,5 2023 ಜನವರಿ ಕಾರ್ಯಕ್ರಮದಲ್ಲಿ ಬುಧವಾರ ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಮ್ಮ ನಡೆ ಶಾಲಾ ಶೈಕ್ಷಣಿಕ ಪ್ರಗತಿಯ ಕಡೆ ಎಂಬ ಕಿರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲಾಗಳಿಗಿಂತ ಕಮ್ಮಿ ಇಲ್ಲವೆಂಬತೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ ಇದರಲ್ಲಿ ಶಿಕ್ಷಕರ ಪಾತ್ರವೇ ಅತೀ ಮುಖ್ಯ, ಇಂದು ಶಿಕ್ಷಣವೂ ವ್ಯಾಪಾಕರಣವಾಗಿದೆ ಪೋಷಕರು ತಮ್ಮ ಮಕ್ಕಳು ಕೇವಲ ಅಂಕ ಗಳಿಕೆಗೆ ಸೀಮಿತ ಮಾಡುತ್ತಿದ್ದಾರೆ, ಪೋಷಕರು ಬಣ್ಣದ ಶಾಲೆಗಳಿಗೆ ಮಾರು ಹೋಗಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಯೋಜನೆ, ಅನುದಾನ ಜಾರಿಗೆ ತರುತ್ತಿದೆ, ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಮಕ್ಕಳ ಭವಿಷ್ಯಕ್ಕಾಗಿ ಕಲಿಕೆ ಮುಖ್ಯವಾಗಿದೆ. ಅಲ್ಲದೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೇಲೂರು ಪ್ರಥಮ ಸ್ಥಾನಕ್ಕೆ ಬರಬೇಕು. ಇದಕ್ಕೆ ಶಿಕ್ಷಕರು ಹೆಚ್ಚಿನ ಒತ್ತು ನೋಡಬೇಕು ಎಂದರು.


ಕ್ಷೇತ್ರ ಶಿಕ್ಷಣಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ ತಾಲೂಕ್ಕಿನ ಶಾಲಾ ಮಕ್ಕಳಿಗೆ ಪರಿಶೀಲನೆ ಪುಸ್ತಕ ನೀಡುತ್ತಿರುವ ಉದ್ದೇಶ, ಮಕ್ಕಳ ವಿದ್ಯಾ ಯುಗ ಸಾರ್ಥಕತೆಯ ಬದುಕಿನೆಡೆಗೆ ಕೊಂಡೋಯ್ಯಲು. ಮಕ್ಕಳ ಶಿಕ್ಷಣವನ್ನು ಸುಲಭದ ರೀತಿಯಲ್ಲಿ ಪೂರೈಸಲೆಂದು ಕಿರು ಪುಸ್ತಕ ಹೊರತರಲಾಗಿದೆ, ಅತೀ ಹೆಚ್ಚು ಅಂಕ ಗಳಿಸಲು ತಿಂಗಳ ಗುರಿ ಕಿರು ಪುಸ್ತಕ ತುಂಬಾ ಸಹಕಾರಿಯಾಗಲಿದೆ, ಮುಕ್ಯೋಪಾದ್ಯರು, ಶಿಕ್ಷಕರು, ಹಾಗೂ ಪೋಷಕರು ಮಕ್ಕಳ ಜೊತೆ ಬೇರೆಯುವ ಕೆಲಸ ಮಾಡಬೇಕಿದೆ, ಸಾರ್ಥಕತೆಯ ಹಾದಿಗೆ ಇಡೀ ಶಿಕ್ಷಣ ವ್ಯವಸ್ಥೆ ಮುಖ್ಯ, ಶಿಕ್ಷಣವನ್ನು ಜ್ಞಾನರ್ಜನೆ ಮತ್ತು ಭವಿಷ್ಯ್ಹಕ್ಕೆ ಉಪಯೋಗಿಸಬೇಕು, ಇದರಲ್ಲಿ ಶಿಕ್ಷಕರ ಕೆಲಸ ಅತೀ ಮುಖ್ಯವಾಗಿದೆ ಎಂದರು.


ರೋಟರಿ ಸಂಸ್ಥೆ ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಇಂದು ತಾಲೂಕಿನ 2000ಕ್ಕೂ ಹೆಚ್ಚು ಮಕ್ಕಳಿಗೆ ನುರಿತ ಶಿಕ್ಷಕರಿಂದ ಪರೀಕ್ಷಾ ಪೂರ್ವ ಸಿದ್ದತ ಪುಸ್ತಕಗಳನ್ನು ನೀಡುತ್ತಿರುವುದು ಮಕ್ಕಳ ಭವಿಷ್ಯ ಉಜ್ವಲವಾಗಲೆಂದು, ಪರೀಕ್ಷೆಯಲ್ಲಿ ಯಾವುದೇ ಆತಂಕ ಇಲ್ಲದೆ ಧೈರ್ಯದಿಂದ ಪರೀಕ್ಷೆ ಬರೆಯಬೇಕು. ಮಕ್ಕಳನ್ನು ಕತ್ತಲೆಯಿಂದ ಬೆಳಕಿನಡೆಗೆ ಕೊಂಡೋಯುವುದೇ ಶಿಕ್ಷಣ, ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡಲು ಶಿಕ್ಷಣವೇ ಮುಖ್ಯ, ಮಕ್ಕಳಲ್ಲಿ ಶಿಸ್ತು, ಸಂಯಮ ಮುಖ್ಯ, ಇದರಲ್ಲಿ ಶಿಕ್ಷಕರ ಪಾತ್ರವೇ ಅತೀ ಮುಖ್ಯ, ರಾಷ್ಟ್ರ ಸೇವೆಗೆ ಶಿಕ್ಷಣ ಕ್ಷೇತ್ರ ಇದ್ದರೆ ಮಾತ್ರ ಸಾಧ್ಯ, ಮಕ್ಕಳ್ಳಲಿರುವ ಕಲೆಗಳನ್ನು ಗುರುತಿಸಿ ಅವರನ್ನು ಸಮಾಜದಲ್ಲಿ ಮುಂದೆ ತರುವ ಕೆಲಸಕ್ಕೆ ಪೋಷಕರು ಹಾಗೂ ಶಿಕ್ಷಕರು ಹೆಚ್ಚು ಸಹಕಾರ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ ಎಂದರು,


ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆ ಪ್ರಾಂಶುಪಾಲ ಪ್ರಶಾಂತ್, ಜಿಲ್ಲಾ ಉಪನಿರ್ದೇಶಕರ ಕಚೇರಿಯ ವಿದ್ಯಾಧಿಕಾರಿ ತಮ್ಮಣ್ಣಗೌಡ, ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್, ಗೆಂಡೆಹಳ್ಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರತನ್.ಕೆ, ಪ್ರದಾನ ಕಾರ್ಯದರ್ಶಿ ವಿಕಾಸ್, ಕಾರ್ಯದರ್ಶಿ ಚಿದನ್, ಇಸಿಓ ಗೋಪಾಲ್, ರವಿಕುಮಾರ್, ಉಪನ್ಯಾಸಕ ಧನಂಜಯ್, ಅನುದಾನಿತ-ಅನುದಾನ ರಹಿತ ಶಾಲಾ ಶಿಕ್ಷಕ ಶಿಕ್ಷಕಿಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net