ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಮುಂದಾಗಿ

Untitled design (3)
ಬಂಗಾರಿ ಕ್ಯಾಂಪ್‌ನ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಡಾ. ಸಿದ್ದರಾಮೇಶ್ವರ ಶರಣರು ಮಾತನಾಡಿದರು. ಜಿಪಂ ಮಾಜಿ ಸದಸ್ಯಬಸವರಾಜ ಹಿರೇಗೌಡರ, ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ರಂಗನಗೌಡ, ಉಪಾಧ್ಯಕ್ಷೆ ಮರಿಯಮ್ಮ, ಸಂಪನ್ಮೂಲ ವ್ಯಕ್ತಿ ಆಂಜನೇಯ, ಎಸ್ಡಿಎಂಸಿ ಅಧ್ಯಕ್ಷ ಬಲಸು ಸೂರ್ಯನಾರಾಯಣ, ಮುಖ್ಯ ಶಿಕ್ಷಕಿ ಶಿವಗಂಗಮ್ಮ ಇದ್ದರು.
Published on

ಗೊರೇಬಾಳ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಡಾ.ಸಿದ್ದರಾಮೇಶ್ವರ ಶರಣರು ಹೇಳಿದರು.


ಬಂಗಾರಿ ಕ್ಯಾಂಪ್‌ನ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರವುಡಕುಂದಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ತರಬೇತಿ ನೀಡಿ ಸ್ಪರ್ಧೆಯಲ್ಲಿ ವಿಜೇತರಾಗುವಂತೆ ಪ್ರೋತ್ಸಾಹಿಸಬೇಕು. ಇಂತಹ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರತಿಭೆಗಳು ರಾಜ್ಯ, ರಾಷ್ಟ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದರು.


ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ ಮಾತನಾಡಿ, ಪಠ್ಯದ ಚಟುವಟಿಕೆಗಳಿಗೆ ಅವಲಂಬಿತರಾಗದೇ ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು. ಸ್ಪರ್ಧೆಯಲ್ಲಿ ಸೊಲು ಗೆಲುವು ಸಮಾನವಾಗಿ ಸ್ವಿಕರಿಸಬೇಕು ಎಂದು ತಿಳಿಸಿದರು.


ಸಮೂಹ ಸಂಪನ್ಮೂಲ ವ್ಯಕ್ತಿ ಆಂಜನೇಯ ಮಾತನಾಡಿ, 18 ಶಾಲೆಗಳು ಮಕ್ಕಳು ಉತ್ಸಾಹದಿಂದ ಪ್ರತಿಭೆಯನ್ನು ಪ್ರದರ್ಶಿಸಿಸಲು ಬಂದಿದ್ದಾರೆ. ಅವರಿಗೆ ಹೆಚ್ಚಿನ ಉತ್ಸಾಹ ತುಂಬಿದ್ದೇವೆೆ ಎಂದರು.


ಮುಖ್ಯ ಶಿಕ್ಷಕಿ ಶಿವಗಂಗಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಾನಪದ, ನೃತ್ಯ ಅಭಿನಯ ಗೀತೆ, ಮಿಮಿಕ್ರಿ ಮತ್ತು ಛದ್ಮವೇಷಗಳ ಪ್ರದರ್ಶನ ನಡೆದವು. ಎಸ್ಡಿಎಂಸಿ ಅಧ್ಯಕ್ಷ ಬಲಸು ಸೂರ್ಯನಾರಾಯಣ, ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ರಂಗನಗೌಡ, ಉಪಾಧ್ಯಕ್ಷೆ ಮರಿಯಮ್ಮ ಮಾನಪ್ಪ, ಮಾಜಿ ಅಧ್ಯಕ್ಷ ಮಹಾಂತೇಶ ಹಿರೇಗೌಡರ, ಸದಸ್ಯರಾದ ಬಿ.ಶ್ರೀನಿವಾಸರಾವ್, ರಂಜಾನ ಸಾಬ್, ಪ್ರಮುಖರಾದ ಸಿಂಹಾದ್ರಿ ಶ್ರೀನಿವಾಸ, ಬಲಸುಸುಬ್ರಹ್ಮಣ್ಯಂ, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net