ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿರಿ

Teachers recognize talent in children
ಸಿಂದಗಿ ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ದತ್ತಿ ನಿಧಿ ಕಾರ್ಯಕ್ರಮಕ್ಕೆ ಪ್ರಾಚಾರ್ಯ ಸಿದ್ದಪ್ಪ ಕಾರಿಮುಂಗಿ ಚಾಲನೆ ನೀಡಿದರು. ಹ.ಮ. ಪೂಜಾರ, ಹಾಸಿಂಪೀರ ವಾಲಿಕಾರ ಇತರರಿದ್ದರು.
Published on

ಸಿಂದಗಿ: ಮಕ್ಕಳ ಜ್ಞಾನದ ಮೌಲ್ಯಮಾಪನದಿಂದ ಗುರುತಿಸುವ ಪ್ರತಿಭೆ ಅವರ ಭವಿಷ್ಯಕ್ಕೆ ಉತ್ತಮ ವೇದಿಕೆ ಒದಗಿಸಬಲ್ಲದು ಎಂದು ಹಿರಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಹೇಳಿದರು.

ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಲಿಂ. ಗುರುಬಾಯಿ ಮೊನಪ್ಪ ಮಾಸ್ತರ ಹೂಗಾರ ಹಾಗೂ ಡಾ. ರಾಮರಾವ ನಾಡಗೌಡ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಶಿಕ್ಷಕರು ಮತ್ತು ಪಾಲಕರು ಶ್ರಮಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಸತಿ ಶಾಲೆಯ ಪ್ರಾಚಾರ್ಯ ಸಿದ್ದಪ್ಪ ಕಾರಿಮುಂಗಿ ಮಾತನಾಡಿ, ಮಕ್ಕಳನ್ನು ಪ್ರೀತಿಸಿ, ಅವರು ಇಚ್ಛಿಸಿದ ಕಲೆಯನ್ನು ಕಲಿಸುವಲ್ಲಿ ಶಿಕ್ಷಕರು ಮತ್ತು ಪಾಲಕರ ಪಾತ್ರ ದೊಡ್ಡದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಕ್ಕಳ ಮನಸ್ಸನ್ನು ಅರಳಿಸಲು ಅಗತ್ಯವಾದ ಪೂರಕ ವಿಷಯಗಳನ್ನು ಶಿಕ್ಷಕರು ಅಳವಡಿಸಿಕೊಂಡು ಅವರಲ್ಲಿನ ಪ್ರತಿಭೆಯನ್ನು ಬೆಳಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಶಿಕ್ಷಕಿ ಜ್ಯೋತಿ ನಂದಿಮಠ ಮಕ್ಕಳ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಕುರಿತು ಮಾತನಾಡಿ, ಸಾಹಿತ್ಯ ಪ್ರಕಾರಗಳಾದ ಕತೆ, ಕವನಗಳನ್ನೊಳಗೊಂಡ ಪಠ್ಯ ಬೋಧನೆ ಪರಿಣಾಮಕಾರಿ ಕಲಿಕೆಯ ವಿಧ ಜಾನಪದ. ಗ್ರಾಮೀಣರ ಜನರ ಸಮುದಾಯಿಕ ಜೀವದ ಕೊಂಡಿಯಾಗಿರುವ ಜಾನಪದ ಸಾಹಿತ್ಯ ನಮ್ಮ ಪೂರ್ವಜರು ಕೊಟ್ಟ ಬಳುವಳಿ. ಅದನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಡಾ. ವಿದ್ಯಾ ಬಡಿಗೇರ ಅವರು ಆರೋಗ್ಯದ ಮಹತ್ವವನ್ನು ತಿಳಿಸಿದರು. ರಾಜೇಸಾಬ ಶಿವನಗುತ್ತಿ, ಮಹಾಂತೇಶ ಪಟ್ಟಣಶೆಟ್ಟಿ, ಅನ್ನಪೂರ್ಣ ಬೆಳೆನ್ನವರ, ಶಿವಾನಂದ ಬಡಾನೂರ, ಖಾದರ ವಾಲೀಕಾರ, ಶಾಂತಪ್ಪ ರಾಣಾಗೋಳ, ಅಮರ ಗಾಯಕವಾಡ ಇತರರಿದ್ದರು.
ಭಾಗ್ಯಜ್ಯೋತಿ ಪಾಟೀಲ, ಪ್ರಿಯದರ್ಶಿನಿ ಜಾಧವ, ಅಂಜನಾ ಕಮತಗಿ, ಶೈಲಶ್ರೀ ಕೇಸರಿ, ನಜ್ಮಾಬೇಗಂ ಮುಜಾವರ, ಸತೀಶಕುಮಾರ ಚೌಧರಿ, ಾರೂಕ ಮಾಸ್ತರ, ಸತೀಶ ಪಟ್ಟಣಶೆಟ್ಟಿ, ಬಿ.ಎಸ್. ಹಿರೇಮಠ, ಅಶೋಕ ಪಟ್ಟಣಶೆಟ್ಟಿ, ಹೀನಾಕೌಸರ, ಎಸ್.ಕೆ. ಮಂದೇವಾಲ, ಶ್ರೀಧರ ಬಡಿಗೇರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net