ಶಿಕ್ಷಕರು ದೈಹಿಕ ಕ್ಷಮತೆ ಕಾಯ್ದುಕೊಳ್ಳಿ

FotoJet (3)
Published on

ತುರುವೇಕೆರೆ: ಶಿಕ್ಷಕರು ದೈಹಿಕ ಮತ್ತು ಮಾನಸಿಕವಾಗಿ ಕ್ಷಮತೆಯನ್ನು ಕಾಯ್ದುಕೊಂಡಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಕ್ರೀಡಾ ತರಬೇತಿ ನೀಡಲು ಅನುಕೂಲವಾಗಲಿದೆ ಬಿಇಒ ಸೋಮಶೇಖರ್​ ತಿಳಿಸಿದರು.

ಕ್ಷೇತ್ರ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ತಾಲೂಕಿನ ಶಿಕ್ಷಕರಿಗೆ ಪಟ್ಟಣದ ಬಾಲಕರ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕ್ರಮಬದ್ಧ ಅಭ್ಯಾಸ ಮಾಡಿದರೆ ಶಿಕ್ಷಕರು ಕೂಡ ಉತ್ತಮ ಕ್ರೀಡಾಪಟಗಳಾಗಬಲ್ಲರು. ಪಠ್ಯ ಬೋಧನೆಯ ಜತೆಗೆ ಸಹಪಠ್ಯ ಚಟುವಟಿಕೆಗಳು ಹಾಗೂ ಕ್ರೀಡೆಯ ಬಗ್ಗೆ ಹೆಚ್ಚಿನ ಒಲವು ಬೆಳೆಸಿಕೊಂಡಲ್ಲಿ ಸದೃಢ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇದರಿಂದ ಶಿಕ್ಷಕರ ಬೋಧನ ಕೌಶಲವೂ ಸುಧಾರಿಸುತ್ತದೆ ಎಂದು ತಿಳಿಸಿದರು.

ಶಿಕ್ಷಕಿ, ಶಿಕ್ಷಕರಿಗೆ ಪ್ರತ್ಯೇಕವಾಗಿ ವಾಲಿಬಾಲ್​, ಗುಂಡು ಎಸೆತ, ಥ್ರೋಬಾಲ್​, 100 ಮೀಟರ್​ ಓಟದ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪದಕ ವಿತರಿಸಲಾಯಿತು.

ಇಸಿಒಗಳಾದ ಸಿದ್ದಪ್ಪ, ಶಿವಕುಮಾರ್​, ಜಿಪಿಟಿ ಶಿಕ್ಷಕರ ಸಂಘದ ಗಿರೀಶ್​, ದೈಹಿಕ ಶಿಕ್ಷಣ ಶಿಕ್ಷಕ ಬಾಣಸಂದ್ರ ರಂಗನಾಥ್​, ಇನ್ನರ್​ ವೀಲ್​ ಕ್ಲಬ್​ನ ಮಮತಾ ಅಶೋಕ್​, ಇಂದ್ರಮ್ಮ, ಸಿಆರ್​ಪಿಗಳು, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net