ಶಿಕ್ಷಕರು ದೇಶದ ಭವಿಷ್ಯ ನಿರ್ಮಾತೃಗಳು

6
ರಾಯಬಾಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ನಿಮಿತ್ತವಾಗಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್​ಭಾವಚಿತ್ರಕ್ಕೆ ಪೂಜಿಸಲಾಯಿತು. ಶಾಸಕ ಡಿ.ಎಂ.ಐಹೊಳೆ, ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಎಂ.ಜಿ.ದಾಸರ, ವಿಠ್ಠಲ ಚಂದರಗಿ, ಶಾಂತಾರಾಮ ಜೋಗಳೆ ಇತರರಿದ್ದರು.
Published on


ರಾಯಬಾಗ: ದೇಶ ಕಟ್ಟುವಲ್ಲಿ ಶಿಕರ ಪಾತ್ರ ಅತ್ಯಂತ ಮಹತ್ವದ್ದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಣ ನೀಡಿ ಭವ್ಯ ಭಾರತದ ಭವಿಷ್ಯತ್ತಿನ ನಾಯಕರಾಗಿ ರೂಪಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ಮಹಾವೀರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಣ ನೀಡುವುದು ಶಿಕರ ಕರ್ತವ್ಯವಾಗಿದೆ ಎಂದರು.

ಕಬ್ಬೂರ ಗೌರಿಶಂಕರ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕರನ್ನು ಸತ್ಕರಿಸಲಾಯಿತು. ಚಿಕ್ಕೋಡಿ ಸಾ.ಶಿ.ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಂ.ಜಿ.ದಾಸರ ಉಪನ್ಯಾಸ ನೀಡಿದರು. ತಾಪಂ ಇಒ ವಿಠ್ಠಲ ಚಂದರಗಿ, ತಹಸೀಲ್ದಾರ್​ ಸುರೇಶ ಮುಂಜೆ, ಬಿಇಒ ಶಾಂತಾರಾಮ ಜೋಗಳೆ, ಸುಭಾಷ ವಲ್ಯಾಪೂರ, ಎಂ.ಪಿ.ಜೀರಗ್ಯಾಳ, ವಿಶ್ವನಾಥ ಹಾರೋಗೇರಿ, ಶಿಕ ಬಿ.ಎಲ್​.ಂಟಿ, ಡಿ.ಎಸ್​.ಮಾಡಲಗಿ, ಕರೆಪ್ಪ ನಾಯಿಕ, ಬಸವರಾಜ ಕಾಂಬಳೆ, ಬಿ.ಎಂ.ಮಾಳಿ, ಎಸ್​.ಆರ್​.ಕಂಬಾರ, ಪಿ.ಎಸ್​.ಶಾರಬಿದ್ರೆ, ಹೆಚ್​.ಬಿ.ಬೆನ್ನಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net