ಶಿಕ್ಷಕರು ಕ್ರಿಯಾಶೀಲರಾಗಿ ಇರಲಿ

IMG-20231002-WA0518 (2)
Published on

ಹುಮನಾಬಾದ್: ಶಿಕ್ಷಕರ ಮೇಲೆ ಮಹತ್ತರ ಜವಾಬ್ದಾರಿ ಇದ್ದು, ಸದಾ ಕ್ರಿಯಾಶೀಲರಾಗಿರಬೇಕು ಎಂದು ಗೊಂಡ ಸಮಾಜದ ಮುಖಂಡ ಶಿವರಾಜ ಚಿನ್ನಕೇರಿ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ತಾಲೂಕು ಸರ್ಕಾರಿ ಗೊಂಡ ನೌಕರರ ಸಂಘದಿAದ ಮಂಗಳವಾರ ಏರ್ಪಡಿಸಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮಾರ್ಥಾಂಡಪ್ಪ ತಳಗೇರಿ ಅವರಿಗೆ ದೊರೆತ್ತಿದ್ದು, ಇದರಿಂದ ಶೈಕ್ಷಣಿಕ ಜವಾಬ್ದಾರಿ ಹೆಚ್ಚಾಗಿದೆ. ಮಕ್ಕಳ ಶ್ರೇಯೋಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಸಂಘದ ಗೌರವ ಅಧ್ಯಕ್ಷ ಮಾಣಿಕಪ್ಪ ಬಕ್ಕನ್ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಮಕ್ಕಳೊಂದಿಗೆ ಸಂತಸದಿಂದ ಬೋಧನೆ ಮಡುತ್ತ ಕ್ರಿಯಾತ್ಮಕ ಚಟುವಟಿಕೆಗಲ್ಲಿ ತೊಡಗಿಸುವಂತೆ ಪ್ರೇರಣೆ ನೀಡಬೇಕು ಎಂದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಜೀವಕುಮಾರ ಅತಿವಾಳೆ, ಮುರಹರಿ ಧರ್ಮಗೊಂಡ, ರಾಮಚಂದ್ರ, ಸರ್ಕಾರಿ ಗೊಂಡ ನೌಕರರ ಸಂಘದ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ್ ಮಾತನಾಡಿದರು. ಪಂಡಿತ ಕಲ್ಯಾಣ, ರಾಜಪ್ಪ ಸಿಂಧೋಲ್, ಕಾಶಪ್ಪ, ಸಂತೋಷ ಹಂದಿಕೇರಾ ಅವರನ್ನು ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಅಂಬಿಕಾ ಚಳಕಾಪುರೆ, ಪ್ರಮುಖರಾದ ಸಂತೋಷ ಜೋಳದಾಪಕೆ, ವಿಠ್ಠಲ್, ಶಿವು ಪವಾರ, ಸಂಗಯ್ಯ ಸ್ವಾಮಿ, ರಾಜಕುಮಾರ ಕಾರಬಾರಿ, ಮಲ್ಲಿಕಾರ್ಜುನ ಸಂಭಾಜಿ, ಕಂಟೆಪ್ಪ, ತಾನಾಜಿ ಪಾಟೀಲ್, ಬಸವರಾಜ ಕಂದಗುಳ, ಗುಂಡಪ್ಪ ದೊಡ್ಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net