ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ

08 (3)
Published on

ಹೊಳೆನರಸೀಪುರ: ಶಾಲಾ ಕಾಲೇಜುಗಳಲ್ಲಿ ಮೊದಲು ವಿದ್ಯಾರ್ಥಿಗಳಿಗೆ ಬದುಕಿನ ಮೌಲ್ಯಗಳನ್ನು ಅರ್ಥೈಸಿ, ಕಲಿಸಿದ ನಂತರ ವಿದ್ಯೆ ಕಲಿಸುವುದು ಇಂದಿನ ದಿನಕ್ಕೆ ಸೂಕ್ತ ಎಂದು ಮಾವಿನಕರೆ ಕೇಂದ್ರೀಯ ನವೋದಯ ವಿದ್ಯಾಲಯದ ಪ್ರಾಂಶುಪಾಲ ಕೃಷ್ಣಸ್ವಾಮಿ ಪಾರ್ಥರ್ ಬನ್ ಅಭಿಪ್ರಾಯಪಟ್ಟರು.
ತಾಲೂಕಿನ ಹಂಗರಹಳ್ಳಿ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಹಾಗೂ ಸಮಾಜ ಸೇವಕ ಎನ್.ಆರ್. ಅನಂತ್‌ಕುಮಾರ್ ಅವರ ಸಹಕಾರದಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಾನು ತಮಿಳುನಾಡಿನ ಮಧುರೈನಿಂದ ಬಂದವನು. ಇಲ್ಲಿನ ಜನ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಸಂತೋಷದ ವಿಷಯ. ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಎನ್.ಆರ್. ಅನಂತ್ ಕುಮಾರ್, ವಾಸು ಾಗೂ ಲಕ್ಷ್ಮಣ್ ಅವರುಗಳು ಈ ಶಾಲೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ, ಹಳ್ಳಿಯ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಂಗರಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಎಲ್ಲ ಶಾಲೆಗಳ 50ಕ್ಕೂ ಹೆಚ್ಚು ಶಿಕ್ಷಕ, ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲೆ ಅನಂತಲಕ್ಷ್ಮೀ, ಕರಿಯಪ್ಪ, ಗಂಗಾಚರಣ್, ಕೌಶಲ್ಯರಾಮ, ರಂಗೇಗೌಡ, ಉಮೇಶ್, ಕುಳ್ಳೇಗೌಡ, ಯತೀಶ್, ಜಗದೀಶ್, ಪುಫ್ಪಾ, ಶಿವಕುಮಾರ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net