ಶಿಕ್ಷಕರಿಗೆ ಬೇಕು ಸಹಾನುಭೂತಿ ಗುಣ

CTD S V S B.Ed students..
Published on

ಚಿತ್ರದುರ್ಗ: ಶಿಕ್ಷಕರಿಗೆ ಸಹಾನುಭೂತಿ, ಸಂವೇದನಾಶೀಲತೆ ಗುಣ ಅಗತ್ಯವೆಂದು ಚಿತ್ರದುರ್ಗ ಡಯಟ್ ಉಪನ್ಯಾಸಕ ಎಸ್. ಬಸವ ರಾಜು ಹೇಳಿದರು. ಹೊಸದುರ್ಗ ಎಸ್‌ವಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ನಗರದ ಡಯಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆ ಕಾರ‌್ಯಾಗಾರದಲ್ಲಿ ಮಾತನಾಡಿ, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅರಿಯುವ ಸಹಾನುಭೂತಿ ಗುಣವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕೆಂದರು.
ಉಪನ್ಯಾಸಕರಾದ ವಿ.ಕನಕಮ್ಮ, ನಿತ್ಯಾನಂದ ಮಾತನಾಡಿದರು. ಎಸ್‌ವಿಎಸ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಗಿರೀಶ್ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net