ಶಿಕ್ಷಕರಿಗೆ ಪಂಚಾಯಿತಿ ಸದಸ್ಯರ ಗೌರವ

Teachers Sanman At Morarji School Mannalli photo
Published on

ಬೀದರ್: ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನರಸಪ್ಪ ಯಾಕತಪುರ ಅವರು ಶಿಕ್ಷಕರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಶಾಲೆಯ ಶಿಕ್ಷಕರು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ. ಹೀಗಾಗಿ ಅವರನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಗಿದೆ ಎಂದು ಹೇಳಿದರು.
ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ, ಪ್ರಾಚಾರ್ಯ ತುಕಾರಾಮ ಯಾತಪ್ಪ, ವಾರ್ಡನ್ ಮಹಾಂತಪ್ಪ ದೊಡ್ಡಮನಿ, ಪ್ರಮುಖರಾದ ಚಂದ್ರಶೇಖರ ಮಡಕಿ, ರಾಜಕುಮಾರ ಮಡಕಿ, ಸಂಜುಕುಮಾರ ಯಾಕತಪುರ, ಕುಪೇಂದ್ರ ಯಾಕತಪುರ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net