ಶಿಕ್ಷಕರ ಸಮಸ್ಯೆ ಸಚಿವರ ಗಮನಕ್ಕೆ ತಂದ ಎಂಎಲ್‌ಸಿ

29 hbd 03
Published on

ಹುಮನಾಬಾದ್: ಮೂರು ತಿಂಗಳಿಂದ ಬಾಕಿ ಇರುವ ಆರ್‌ಎಂಎಸ್‌ಎ ಶಿಕ್ಷಕರ ವೇತನ ಪಾವತಿ ಸೇರಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮನವಿ ಮಾಡಿದರು. ಬೆಂಗಳೂರಿನಲ್ಲಿ ಭಾನುವಾರ ಸಚಿವರನ್ನು ಭೇಟಿ ಮಾಡಿ, ಮೂರು ತಿಂಗಳಿಂದ ಬಾಕಿ ಇರುವ ಆರ್‌ಎಂಎಸ್ ಶಿಕ್ಷಕರ ವೇತನ ಪಾವತಿ, ಸಹ ಶಿಕ್ಷಕರಿಂದ ಮುಖ್ಯೋಪಾಧ್ಯಾಯರ ಹುದ್ದೇಗೆ ಬಡ್ತಿ ನೀಡುವುದು, ಸಹ -ಶಿಕ್ಷಕರಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ನೀಡುವುದು, ೨೦೦೮ರಲ್ಲಿ ನೇಮಕಾತಿ ಹೊಂದಿದ ಶಿಕ್ಷಕರಿಗೆ ಒಂದು ವಾರ್ಷಿಕ ವೇತನ ನೀಡುವುದು ಸೇರಿ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು. ಸಚಿವರು ಸಕರಾತ್ಮರವಾಗಿ ಸ್ಪಂದಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net