ಶಿಕ್ಷಕರ ಸಮಸ್ಯೆ ಆಲಿಸಿದ ಎಂಎಲ್ಸಿ

Narayanaswamy
Published on

ಚಿತ್ರದುರ್ಗ: ನಗರದ ಎಸ್‌ಜೆಎಂಐಟಿ, ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಐಟಿಐ, ಕಬೀರಾನಂದಾಶ್ರಮದ ಕಾಲೇಜುಗಳು ಸೇರಿ ವಿವಿಧ ಶಾಲಾ-ಕಾಲೇಜುಗಳಿಗೆ ಗುರುವಾರ ಭೇಟಿ ನೀಡಿದ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಶಿಕ್ಷಕರ, ಉಪನ್ಯಾಸಕರ ಸಮಸ್ಯೆ ಆಲಿಸಿದರು. ನಂತರ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಕಬೀರಾನಂದಾಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ನೀಲಕಂಠಚಾರ್, ನಿವೃತ್ತ ಮುಖ್ಯಶಿಕ್ಷಕ ಜಯಣ್ಣ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ಬಸವರಾಜು, ಪ್ರಾಂಶುಪಾಲ ಭರತ್, ವ್ಯವಸ್ಥಾಪಕರಾದ ಕುಮಾರಸ್ವಾಮಿ, ಶಿವಕುಮಾರ್, ಭೀಮಾರೆಡ್ಡಿ, ಹನುಮಂತಪ್ಪ, ಚಿಕ್ಕ ನಾಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net