ಶಿಕ್ಷಕರ ಸಂಘಕ್ಕೆ ಸಂಜೀವ ಮೇತ್ರೆ ತಾಲೂಕು ಅಧ್ಯಕ್ಷ

IMG-20230920-WA0027
Published on

ಔರಾದ್: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ಸಂಜೀವ ಮೇತ್ರೆ ನೇಮಕವಾದರು. ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ನೇಮಕ ಮಾಡಲಾಯಿತು.

ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ ಮಾತನಾಡಿ, ತಾಲೂಕಿನ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಸದಾ ಶ್ರಮಿಸಬೇಕು ಎಂದು ಹೇಳಿದರು. ಜಿಲ್ಲಾ ಕಾರ್ಯದರ್ಶಿ ಪ್ರಭುಲಿಂಗ ಗೂಗಾವೆ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗಿರೆ, ಪ್ರೌಢ ಶಾಲಾ ಶಿಕ್ಷಕಕರ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಬಿರಾದಾರ, ಕಾರ್ಯದರ್ಶಿ ರಾಮರಾವ ರಾಠೋಡ್, ಪ್ರಮುಖರಾದ ಪಂಡರಿ ಆಡೆ, ಸಲೀಂ, ಪ್ರೇಮಶೇಖರ ನಾಗಮೂರ್ತಿ, ಬಸವರಾಜ ಪಾಟೀಲ್, ವಿಜಯಕುಮಾರ, ಸಂದೀಪ ಆಡೆ, ಸಂಜೀವನ ಬಿರಾದಾರ, ಮಹಾದೇವ ಚಿಟಗೆರೆ, ರಣಜಿ ಶಿಂಧೆ, ಪ್ರಕಾಶ ಬರದಾಪುರೆ, ರಾಜಕುಮಾರ ಡೊಂಗ್ರೆ, ನಾರಾಯಣ ರಾಠೋಡ, ಮಾರ್ತಾ ಬಾಯಿ, ಸಂಜಿವ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net