ಶಿಕ್ಷಕರ ವರ್ಗಾವಣೆಯನ್ನು ತನಿಖೆಗೊಳಪಡಿಸಿ

10-08-Shiva-2
ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ನಡೆದ ಅಕ್ರಮ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ, ಪದಾಕಾರಿಗಳಾದ ಕರುಣಾಕರ ರೆಡ್ಡಿ, ಎಂ.ಡಿ.ರಫೀಕ್, ರವಿಕುಮಾರ, ಜಾರ್ ಶರ್ೀ ಇದ್ದರು.
Published on

ರಾಯಚೂರು: ಇತ್ತೀಚೆಗೆ ಜರುಗಿದ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಇಲಾಖೆ ನಿಯಮಗಳನ್ನು ಉಲ್ಲಂಸಿ ವರ್ಗಾವಣೆ ನಡೆಸಲಾಗಿದ್ದು, ಶಿಕ್ಷಕರ ಕೊರತೆಯಿರುವ ಶಾಲೆಯಿಂದ ನಿಯಮ ಮೀರಿ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗಿದೆ ಎಂದು ದೂರಿದರು.
ಬಿಇಒಗಳ ಮೇಲೆ ಒತ್ತಡ ಹಾಕಿ ಶಿಕ್ಷಕರನ್ನು ಬಿಡುಗಡೆಗೊಳಿಸುವಂತೆ ಡಿಡಿಪಿಐ ವೃಷಭೇಂದ್ರಯ್ಯ ಒತ್ತಡ ಹೇರುತ್ತಿದ್ದು, ಇದರಿಂದ ಶಾಲೆಯಲ್ಲಿ ಕಾಯಂ ಶಿಕ್ಷಕರ ಕೊರತೆ ಉಂಟಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯುಂಟಾಗುತ್ತಿದೆ. ವರ್ಗಾವಣೆಗೊಂಡ ಶಿಕ್ಷಕರ ಬಿಡುಗಡೆಯ ಹಿಂದೆ ಹಣದ ವ್ಯವಹಾರ ನಡೆದಿದೆ.
ವರ್ಗಾವಣೆಗೊಂಡರೂ ಡಿಡಿಪಿಐ ವೃಷಭೇಂದ್ರಯ್ಯ ಹುದ್ದೆಯಿಂದ ಬಿಡುಗಡೆಗೊಂಡು ವರ್ಗಾವಣೆಗೊಂಡ ಹುದ್ದೆಗೆ ಹೋಗದೆ ಹುದ್ದೆಯಲ್ಲಿ ಮುಂದುವರಿಯುತ್ತಿದ್ದು, ಕೂಡಲೇ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕು. ವರ್ಗಾವಣೆ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ, ಪದಾಕಾರಿಗಳಾದ ಕರುಣಾಕರ ರೆಡ್ಡಿ, ಎಂ.ಡಿ.ರಫೀಕ್, ರವಿಕುಮಾರ, ಜಾರ್ ಶರ್ೀ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net