

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೪ ಜನ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ರದ್ದುಗೊಳಿಸಿ ಮರು ನಿಯುಕ್ತಿಗೊಳಿಸಬೇಕು ಎಂದು ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ಯಾಳಕರ ಅವರಿಗೆ ಮನವಿ ಸಲ್ಲಿಸಿದರು.
ಕೆಲವೇ ದಿನಗಳಲ್ಲಿ ಶೈಕ್ಷಣಿಕ ವರ್ಷವೂ ಕೊನೆಗೊಳ್ಳುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಲೇಜಿನ ನಾಲ್ವರು ಶಿಕ್ಷಕರನ್ನು ಽಡೀರ್ ವರ್ಗಾವಣೆ ಮಾಡಿದ್ದರಿಂದ ಆ ಶಿಕ್ಷಕರು ಹೇಳುತ್ತಿದ್ದ ತರಗತಿಗಳು ಅಲ್ಲಿಯೇ ನಿಂತಿವೆ. ಇದು ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಈ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹಳ್ಳಿಗಳಿಂದ ಬರುತ್ತಿದ್ದ ಅವರಿಗೆಲ್ಲ ಭವಿಷ್ಯದ ಚಿಂತೆ ಕಾಡತೋಡಗಿದೆ. ದಯಾಳುಗಳಾದ ತಾವು ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ವರ್ಗಾವಣೆ ಮಾಡಿರುವ ಎಲ್ಲ ಶಿಕ್ಷಕರನ್ನು ವರ್ಗಾವಣೆ ಆದೇಶವನ್ನು ಹಿಂಪಡೆದು, ನಮ್ಮ ಕಾಲೇಜಿನಲ್ಲೇ ಮುಂದುವರೆಸಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳಾದ ಮಹೇಶ ಭಜಂತ್ರಿ, ವಿಶ್ವನಾಥ ತಿಮ್ಮಾಪುರ, ಚಂದ್ರು ತಿಮ್ಮಾಪುರ, ಸಿದ್ದನಗೌಡ ಕರಿಗೌಡರ, ಸಿದ್ದಮ್ಮ ಹನಮನೇರಿ, ನೀಲ್ಲಮ್ಮ ಶೆಲ್ಲಿಕೇರಿ, ಅಂಬಿಕಾ ತೊಗಟಗೇರಿ ಇತರರಿದ್ದರು.