ಶಿಕ್ಷಕರ ಮೇಲಿದೆ ಬಹುದೊಡ್ಡ ಜವಾಬ್ದಾರಿ

klb3
ಚಿತ್ತಾಪುರದ ಶ್ರೀಮತಿ ಮಹಾದೇವಮ್ಮ ಬಿ.ಪಾಟೀಲ್ ಸ್ಮಾರಕ ಸಿಬಿಎಸ್‌ಇ ಶಾಲೆಯಲ್ಲಿ 15 ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜಯಂತ ಕುಲಕರ್ಣಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ನಾಗರೆಡ್ಡಿ ಪಾಟೀಲ್ ಕರದಾಳ, ವಿಜಯಕುಮಾರ ಹಂಚಿನಾಳ, ಡಾ. ಜಯಶ್ರೀ ಎಸ್.ರೆಡ್ಡಿ ಇತರರಿದ್ದರು.
Published on

ಚಿತ್ತಾಪುರ: ಶಿಕ್ಷಕ ವೃತ್ತಿ ಪವಿತ್ರವಾದದ್ದು, ಅಲ್ಲದೆ ಜವಾಬ್ದಾರಿಯನ್ನು ಹೊಂದಿದೆ. ಇದನ್ನು ಸಮರ್ಪಕವಾಗಿ ನಿಭಾಯಿಸುವ ಕೌಶಲ ಪ್ರತಿಯೊಬ್ಬ ಶಿಕ್ಷಕ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಹೌಸಿಂಗ್ ಸೊಸೈಟಿ ಜಿಲ್ಲಾಧ್ಯಕ್ಷ ವಿಜಯಕುಮಾರ ಹಂಚಿನಾಳ ಹೇಳಿದರು.

ವಿಶ್ವಗುರು ಶಿಕ್ಷಣ ಸಂಸ್ಥೆಯ ಶ್ರೀಮತಿ ಮಹಾದೇವಮ್ಮ ಬಿ.ಪಾಟೀಲ್ ಸ್ಮಾರಕ ಸಿಬಿಎಸ್‌ಇ ಶಾಲೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ಜಯಂತ ಕುಲಕರ್ಣಿ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಪ್ರಾಚಾರ್ಯೆ ಡಾ.ಜಯಶ್ರೀ ಎಸ್. ರೆಡ್ಡಿ ಅವರಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಸAಸ್ಥೆ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ಅಧ್ಯಕ್ಷತೆವಹಿಸಿ ಮಾತನಾಡಿ, ಜಯಂತ ಕುಲಕರ್ಣಿ ಅವರ ಸೇವೆ ಅಪಾರವಾದದ್ದು. 2010ರಲ್ಲಿ ಕೇವಲ 33 ಮಕ್ಕಳಿಂದ ಪ್ರಾರಂಭವಾದ ಶಾಲೆಯು ಇಂದು ಸಾವಿರ ಮಕ್ಕಳನ್ನು ಹೊಂದಿದೆ. ಈ ಶಾಲೆ ಅಭಿವೃದ್ಧಿಯಲ್ಲಿ ಪ್ರಾಚಾರ್ಯರ ಕೊಡುಗೆಯೂ ಅಪಾರವಾಗಿದೆ ಎಂದು ಹೇಳಿದರು.

ಸಂಸ್ಥೆ ಸದಸ್ಯರಾದ ಪ್ರಕಾಶ ಜೈನ್, ಅಣ್ಣಾರಾವ ಪಾಟೀಲ್, ಪ್ರಾಚಾರ್ಯರಾದ ಡಾ.ಜಯಶ್ರೀ ಎಸ್.ರೆಡ್ಡಿ, ಸೋಮಶೇಖರ ಕಲಶೆಟ್ಟಿ ಇತರರಿದ್ದರು. 15 ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜಯಂತ ಕುಲಕರ್ಣಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಬೀಳ್ಕೊಡಲಾಯಿತು. ಶಿಕ್ಷಕಿ ರಚನಾ ಸ್ವಾಗತಿಸಿದರು. ಶಿಕ್ಷಕಿ ರಹತ್ ವಂದಿಸಿದರು. ಶಿಕ್ಷಕಿ ದೀಪ ತಳವಾರ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net