ಶಿಕ್ಷಕರ ನೇಮಕಾತಿಯಲ್ಲಿನ ತಾರತಮ್ಯ ಸರಿಪಡಿಸಿ

klb2
ಶಹಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ಸಾವಿತ್ರಿಬಾಯಿ ಫುಲೆ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಲ್ಲಯ್ಯ ಗುತ್ತೇದಾರ್, ಮಲ್ಲಿಕಾರ್ಜುನ ಸೇಡಂ, ಶಿವಶರಣಪ್ಪ ಮಂಠಾಳೆ, ಪ್ರಕಾಶ ನಾಯ್ಕೋಡಿ, ಜಮೀಲ್ ಇಮ್ರಾನ್ ಅಹ್ಮದ್ ಇತರರಿದ್ದರು.
Published on

ಶಹಾಬಾದ್: ದಕ್ಷಿಣ ಕರ್ನಾಟಕಕ್ಕೆ ಹೊಲಿಸಿದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಿದ್ದು, ನಮ್ಮಲ್ಲಿ ಪ್ರತಿ 40 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಿದ್ದಾರೆ. ಈ ತಾರತಮ್ಯ ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಒತ್ತಾಯಿಸಿದರು.
ಭಂಕೂರ ಗಾಯಕವಾಡ ಸಭಾಗೃಹದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಕರ ನೇಮಕಾತಿ ತಾರತಮ್ಯದ ಮಧ್ಯೆಯೂ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲ ಜವಾಬ್ದಾರಿಯಾಗಿದೆ ಎಂದರು.

ಕಕ ಭಾಗದ ಸರ್ಕಾರಿ ನೌಕರರ ಪದೋನ್ನತಿಯಲ್ಲಿ 371 (ಜೆ) ಕಲಂ ಅನ್ವಯಿಸಬೇಕೆಂದು ಈಗಾಗಲೇ ಸಂಬAಧಿಸಿದ ಸಚಿವರಿಗೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ 5 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಭಾಗದಲ್ಲಿನ ಮಕ್ಕಳ ಅಪೌಷ್ಟಿಕ ನಿವಾರಣೆಗೆ ಉದ್ಯಮಿ ಅಜೀಂ ಪ್ರೇಮ್‌ಜಿ ಮುಂದೆ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಉದ್ಘಾಟಿದರು. ಕೇಂದ್ರ ಸಾಹಿತ್ಯ ಅಕೆಡೆಮಿ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಉಪನ್ಯಾಸ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ್, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಪ್ರಮುಖರಾದ ಶಿವಶರಣಪ್ಪ ಮಂಠಾಳೆ, ಪ್ರಕಾಶ ನಾಯ್ಕೋಡಿ, ಜಮೀಲ್ ಇಮ್ರಾನ್ ಅಹ್ಮದ್, ಡಾ.ಚಿದಾನಂದ ಕುಡ್ಡನ್, ವಿಜಯಲಕ್ಷ್ಮೀ ಪಾಟೀಲ್, ಚನ್ನಬಸಪ್ಪ ಕೊಲ್ಲೂರ, ಪ್ರವೀಣ ಹೇರೂರ, ಅನೀಲಕುಮಾರ ಕುಸಿಕರ್, ಶ್ರೀಶೈಲ ಮಠ, ಗಿರಿಮಲ್ಲಪ್ಪ ವಳಸಂಗ, ನಾಗೇಶ ಜಾಹಗೀರದಾರ, ರವಿಕುಮಾರ ಹಾದಿಮನಿ ಇತರರಿದ್ದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸರೋಜಾ ಪ್ರಾರ್ಥಿಸಿದರು. ಶಿವಪುತ್ರ ಕರಣಿಕ ಸ್ವಾಗತಿಸಿದರು. ಉದಯಕುಮಾರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net