ಶಿಕ್ಷಕರ ತರಬೇತಿಗೆ ಅನುದಾನ ಬಿಡುಗಡೆ

DIET photo-1.1 29-11-2023--04
Published on

ಚಿತ್ರದುರ್ಗ: ವೃತ್ತಿಪರ ಸಾಮರ್ಥ್ಯ ವೃದ್ಧಿಗೆ ಶೈಕ್ಷಣಿಕ ತರಬೇತಿಗಳು ಪೂರಕವಾಗಿವೆ ಎಂದು ರಾಜ್ಯಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ)ನಿರ್ದೇಶಕಿ ವಿ.ಸುಮಂಗಲಾ ಹೇಳಿದರು.
ಡಿಎಸ್‌ಇಆರ್‌ಟಿಯಿಂದ ಬುಧವಾರ ಆಯೋಜಿಸಿದ್ದ ರಾಜ್ಯದ 34 ಡಯಟ್‌ಗಳ ಪ್ರಗತಿ ಪರಿಶೀಲನೆ ಆನ್‌ಲೈನ್ ಸಭೆಯಲ್ಲಿ ಮಾತನಾ ಡಿದ ಅವರು, ರಾಜ್ಯದ ಎಲ್ಲ ಸರ್ಕಾರಿ ಪ್ರೌಢಶಾಲೆಗಳ ಎಲ್ಲ ವಿಷಯಗಳ ಶಿಕ್ಷಕರಿಗೆ 5 ದಿನದ ತರಬೇತಿಗೆ ಅನುದಾನ ಬಿಡುಗಡೆ ಮಾಡ ಲಾಗಿದೆ. ಪ್ರತಿ ಡಯಟ್‌ನವರು ನಿಗದಿತ ಅವಧಿಯೊಳಗೆ ತರಬೇತಿ ಪೂರ್ಣಗೊಳಿಸಬೇಕೆಂದರು.
ಚಿತ್ರದುರ್ಗದ ಡಯಟ್‌ನಲ್ಲಿ ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ಎಚ್.ಗಿರಿಜಾ, ಅಶ್ವಥ್ ನಾರಾಯಣ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಎನ್.ರಾಘವೇಂದ್ರ, ಯು.ಸಿದ್ದೇಶಿ, ಬಿ.ಎಸ್.ನಿತ್ಯಾನಂದ, ಸಿ.ಎಸ್.ಲೀಲಾವತಿ, ವಿ.ಕನಕಮ್ಮ, ಎನ್.ಮಂಜುನಾಥ್, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net