

ಚಿತ್ರದುರ್ಗ: ಕರ್ನಾಟಕ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.3ರಂದು ನಡೆಯಲಿದೆ ಎಂದು ಡಿಸಿ ಟಿ.ವೆಂಕಟೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಚಿತ್ರದುರ್ಗ ನಗರದ 2 ಸೇರಿ ಜಿಲ್ಲೆಯ ಉಳಿದ ತಾಲೂಕು ಕೇಂದ್ರಗಳಲ್ಲಿ ತಲಾ ಒಂದರಂತೆ 7 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದರು.
ಮೊಳಕಾಲ್ಮೂರು ತಾಲೂಕಿನಲ್ಲಿ 222 ಪುರುಷರು ಹಾಗೂ 46 ಮಹಿಳೆಯರು ಸೇರಿ 268 ಮತದಾರರಿದ್ದಾರೆ. ಚಳ್ಳಕೆರೆ 754- 265-1019. ಚಿತ್ರದುರ್ಗ 990-614-1604. ಹಿರಿಯೂರು 601-264-865. ಹೊಸದುರ್ಗ 508-172-680 ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 367 ಪುರುಷರು ಮತ್ತು 110 ಮಹಿಳೆಯರು ಸೇರಿ 477 ಮತದಾರರಿದ್ದಾರೆ. 3442 ಪುರುಷರು ಮತ್ತು 1471 ಮಹಿಳೆಯ ರು ಸೇರಿ ಜಿಲ್ಲೆಯಲ್ಲಿ 4913ಮತದಾರರಿದ್ದಾರೆ ಎಂದು ಹೇಳಿದರು.
*ಆಯೋಗದ ಪೆನ್ನನ್ನೇ ಬಳಸಬೇಕು: ಆಯೋಗ ಕೊಡುವ ಪೆನ್ನನ್ನೇ ಬಳಸಿ ಪ್ರಾಶಸ್ಯದ ಮತದಾನ ಮಾಡಬೇಕಿದೆ. ಮತದಾರರ ಗುರುತಿನ ಚೀಟಿ ಅಥವಾ ಪರ್ಯಾಯ ದಾಖಲೆಗಳನ್ನು ಬಳಸಿ ಮತದಾನ ಮಾಡಬಹುದು ಎಂದು ತಿಳಿಸಿದರು.
ಅರ್ಹ ಮತದಾರರಿಗೆ ಸಾಂದರ್ಭಿಕ ರಜೆ ಇರುತ್ತದೆ. ಜೂ.2ರಂದು ಮಸ್ಟರಿಂಗ್, 3ರಂದು ಮತದಾನದ ನಂತರದಲ್ಲಿ ಜಿಲ್ಲಾ ಕೇಂದ್ರದಲ್ಲಿ ಡಿಮಸ್ಟರಿಂಗ್ ಬಳಿಕ ಬೆಂಗಳೂರಿನ ಸರ್ಕಾರಿ ಆರ್ಟ್ಸ್ ಕಾಲೇಜಿಗೆ ಮತಪೆಟ್ಟಿಗೆಗಳನ್ನು ರವಾನಿಸಲಾಗುವುದು. ಜೂ.6ರಂದು ಅಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.
*ಮತಗಟ್ಟೆಗಳ ವಿವರ
ಮೊಳಕಾಲ್ಮೂರು-ತಾಲೂಕು ಆಡಳಿತ ಸೌಧ. ಚಳ್ಳಕೆರೆ-ಬಿಎಂಜಿಎಚ್‌ಎಸ್ ಶಾಲೆ. ಚಿತ್ರದುರ್ಗ-ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಕೊಠಡಿ ಸಂಖ್ಯೆ 1 ಮತ್ತು 2. ಹಿರಿಯೂರು-ತಾಲೂಕು ಆಡಳಿತ ಸೌಧ. ಹೊಸದುರ್ಗ-ತಾಲೂಕು ಕಚೇರಿ ಸಭಾಂಗಣ. ಹೊಳಲ್ಕೆರೆ-ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆ.