ಶಿಕ್ಷಕರ ಕೊಡುಗೆ ದೊಡ್ಡದು

aurad 1
ಔರಾದ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕ ನಾಗನಾಥ ಚಿಟ್ಮೆ ಅವರನ್ನು ಸನ್ಮಾನಿಸಲಾಯಿತು. ಚಂದ್ರಕಾಂತ ನಿರ್ಮಳೆ, ಶಿವಕುಮಾರ ಘಾಟೆ, ಡಾ.ಧನರಾಜ ರಾಗಾ, ಸಿದ್ರಾಮ ನಿಡೋದೆ, ಕಲ್ಲಪ್ಪ ದೇಶಮುಖ, ಅನೀಲ ಜಿರೋಬೆ ಇದ್ದರು.
Published on

ಔರಾದ್: ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಕೊಡುಗೆ ಈ ಸಮಾಜಕ್ಕೆ ದೊಡ್ಡದು ಎಂದು ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.

ಕಾಯಕ ಯೋಗಿ ಟ್ರಸ್ಟ್ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಪಠ್ಯ ಬೋಧಿಸುವ ಜತೆಗೆ ಮಕ್ಕಳಿಗೆ ನೈತಿಕ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದರು.

ಮುಖ್ಯ ಶಿಕ್ಷಕ ಚಂದ್ರಕಾಂತ ನಿರ್ಮಳೆ ಮಾತನಾಡಿದರು. ನೀಲಗಂಗಾ ಚಿಟ್ಮೆ, ಶರಣಪ್ಪ ಚಿಟ್ಮೆ, ಡಾ.ಧನರಾಜ ರಾಗಾ, ಸಿದ್ರಾಮ ನಿಡೋದೆ, ಕಲ್ಲಪ್ಪ ದೇಶಮುಖ, ಧನರಾಜ ನಿಟ್ಟೂರೆ, ಗಣಪತಿ ಮೇತ್ರೆ ಇತರರಿದ್ದರು. ಕಾಯಕಯೋಗಿ ಟ್ರಸ್ಟ್ ಕಾರ್ಯದರ್ಶಿ ಅನೀಲ ಜಿರೋಬೆ ಸ್ವಾಗತಿಸಿ, ನಿರೂಪಣೆ ಮಾಡಿದರು. ನಿವೃತ್ತ ಶಿಕ್ಷಕ ನಾಗನಾಥ ಚಿಟ್ಮೆ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net