

ಕಲಬುರಗಿ: ಶಿಕ್ಷಕರ ಅಭಿವೃದ್ಧಿ ಹಾಗೂ ಹಿತ ಕಾಯಲು ಪ್ರಾಥಮಿಕ ಶಿಕ್ಷಕ ಸಮುದಾಯ ನಮ್ಮನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಶಾಖೆಗೆ ಸ್ಪರ್ಧಿಸಿರುವ ನಂದಿನಿ ಸನಬಾಳ ಹಾಗೂ ದೇವಿಂದ್ರಪ್ಪ ಗಣಮುಖಿ ಮನವಿ ಮಾಡಿದರು. ನ.೧೬ರಂದು ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯಲಿದೆ. ನಗರದ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಸುಮಾರು ೧೧೪೮ ಶಿಕ್ಷಕ ಮತದಾರರು ಬೆಂಬಲಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶೇ.೯೫ ಶಿಕ್ಷಕರನ್ನು ಭೇಟಿ ಮಾಡಿ ಮತಯಾಚಿಸಲಾಗಿದೆ. ಗೆಲುವು ಸಾಧಿಸಿದರೆ, ನಗರದಲ್ಲಿ ಸುಸಜ್ಜಿತ ಗುರುಭವನ, ನೂತನ ಪಿಂಚಣಿ ಯೋಜನೆ ರದ್ದು ಮಾಡಿ, ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಸರ್ಕಾರದ ಮೇಲೆ ಒತ್ತಡ ಸೇರಿ ಶಿಕ್ಷಕರ ವಿವಿಧ ಬೇಡಿಕೆಗೆ ಹೋರಾಡಲಾಗುವುದು ಎಂದರು. ಚುನಾವಣೆಗೂ ಪೂರ್ವದಲ್ಲಿ ಅವಿರೋಧ ಆಯ್ಕೆ ನಮ್ಮ ಹತ್ತಿರವಿತ್ತು. ಆದರೆ, ಸ್ಪರ್ಧಿಸಿದ ಶಿಕ್ಷಕರು ಸ್ಪಂದಿಸದೆ ಚುನಾವಣೆ ನಡೆಯುವಂತೆ ಮಾಡಿದ್ದಾರೆ. ಶಿಕ್ಷಕರ ಅಭಿವೃದ್ಧಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಸಹ ಶಿಕ್ಷಕ ಶರಣಬಸಪ್ಪ ನರೋಣ ಇದ್ದರು.