ಶಿಕ್ಷಕನಿಗೆ 6.04 ಲಕ್ಷ ರೂ. ವಂಚನೆ

money
ಸಾಂದರ್ಭಿಕ ಚಿತ್ರ
Published on

ಚಿತ್ರದುರ್ಗ: ಶಿಕ್ಷಕರೊಬ್ಬರು ವಾಟ್ಸ್‌ಆ್ಯಪ್ ಸಂದೇಶ ನಂಬಿ, ಹಣಗಳಿಸಲು ಹೋಗಿ ಬರೋಬ್ಬರಿ 6.04 ಲಕ್ಷ ಆನ್‌ಲೈನ್ ಮೂಲಕ ಕಳೆದುಕೊಂಡಿದ್ದಾರೆ.

ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಎಂ.ಕೆ.ಗಿರಿ ಪ್ರಕಾಶ್ ಹಣ ಕಳೆದುಕೊಂಡ ಶಿಕ್ಷಕ. ವಾಟ್ಸ್‌ಆ್ಯಪ್‌ನಲ್ಲಿ ಇವರಿಗೆ ಹೆಚ್ಚು ಹಣಗಳಿಸುವ ಕುರಿತು ಸಂದೇಶವೊಂದು ಬಂದಿದೆ. ಇದರ ಮೇಲೆ ವಿಶ್ವಾಸವಿಟ್ಟು ಬ್ಯಾಂಕ್ ಖಾತೆಗಳಿಂದ ಆನ್‌ಲೈನ್ ಮೂಲಕ ಪಾವತಿಸಿದ್ದಾರೆ. ನಂತರ ಹಣ ಪಡೆದವರ ಮೊಬೈಲ್ ಸ್ವೀಚ್ ಆಫ್ ಆಗಿದೆ. ಈ ಕುರಿತು ಚಿತ್ರದುರ್ಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್ ವಂಚನೆ ಕುರಿತು ಪೊಲೀಸ್ ಇಲಾಖೆ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ವಿದ್ಯಾವಂತರೇ ಈ ಜಾಲಕ್ಕೆ ಬೀಳುತ್ತಿರುವುದು ಸೋಜಿಗಿದ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net