ಶಿಕ್ಷಕನಿಂದ ವಿದ್ಯಾರ್ಥಿಗೆ ಹಲ್ಲೆ, ವಿದ್ಯಾರ್ಥಿ ಸಾವು.

1
Published on

ಗದಗ:

ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕನಾದ ಮುತ್ತು ಹಡಗಲಿ ಎಂಬುವನು ಹಲ್ಲೆ ನಡೆಸಿದ ಪರಿಣಾಮ ಶಾಲಾ ವಿದ್ಯಾರ್ಥಿ ಭರತ್ ಬಾರಕೇರಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಹಲ್ಲೆ ಮಾಡುತ್ತಿದ್ದನ್ನು ಪ್ರಶ್ನಿಸಿದ ವಿದ್ಯಾರ್ಥಿಯ ತಾಯಿ ಗೀತಾ ಬಾರಕೇರಿಗೂ ಮುತ್ತ ಹಡಗಲಿ ಹಲ್ಲೆ ನಡೆಸಿ, ಪರಾರಿ ಆಗಿದ್ದಾನೆ. ಗೀತಾ ಬಾರಕೇರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷನ ಹುಚ್ಚಾಟದಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗೀತಾ ಬಾರಕೇರಿ ಅದೇ ಶಾಲೆಯಲ್ಲಿ(ಹದಲಿ) ಶಿಕ್ಷಕಿ ಆಗಿದ್ದಾರೆ.

ಶಿಕ್ಷ ಮುತ್ತು ಹಡಗಲಿ ವಿದ್ಯಾರ್ಥಿ ಭರತ್ ಮೇಲೆ ಹಲ್ಲೆ ನಡೆಸಿ ಮಹಡಿಯಿಂದ ದೂಡಿದ್ದಾನೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿ ಭರತ್ ತೀವ್ರ ಪೆಟ್ಟು ಬಿದ್ದಿದೆ. ಗೀತಾ ಬಾರಕೇರಿ ಮತ್ತು ಪಾಟೀಲ ಎಂಬ ಶಾಲಾ ಶಿಕ್ಷಕರು ಆರೋಪಿತನನ್ನು ಪ್ರಶ್ನಿಸಿದ್ದಾರೆ. ಏಕಾಏಕಿ ಸಲಾಕೆಯಿಂದ ಹಲ್ಲೆ ನಡೆಸಿ ಆರೋಪಿ ಪರಾರಿ ಆಗಿದ್ದಾನೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net