ಶಿಕ್ಷಕ ಹಣಮಂತಗೆ ಕರ್ನಾಟಕ ಕಣ್ಮಣಿ ಪ್ರಶಸ್ತಿ

ph 1
Published on

ಅಕ್ಕಲಕೋಟ: ಗಡಿಭಾಗದ ಹೊಸೂರ ಶಾಲೆ ಶಿಕ್ಷಕ ಹಣಮಂತ ನಾಟೀಕಾರ ಅವರಿಗೆ ರಾಜ್ಯ ಮಟ್ಟದ ಕರ್ನಾಟಕ ಕಣ್ಮಣಿ ಪ್ರಶಸ್ತಿ ದೊರಕಿದೆ.

ಕಲಬುರಗಿಯಲ್ಲಿ ಪಂಡಿತ ಪುಟ್ಟರಾಜ ಕಲಾ ಸೇವಾ ಸಂಘ ಇತ್ತೀಚೆಗೆ ಹಮ್ಮಿಕೊಂಡ ಸಂಗೀತ ಸೌರಭ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಸೇವೆಗಾಗಿ ನಾಟೀಕಾರ ಅವರಿಗೆ ಕರ್ನಾಟಕ ಕಣ್ಮಣಿ ಪ್ರಶಸ್ತಿಯನ್ನು ಶ್ರೀ ಮಳೇಂದ್ರ ವಿಶ್ವರಾಧ್ಯ ಶಿವಾಚಾರ್ಯರು, ಬಿಇಒ ಮಾರುತಿ ಹುಜರಾತಿ ಪ್ರದಾನ ಮಾಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಣೆಗೆ ಶ್ರಮಿಸುತ್ತಿರುವ ನಾಟೀಕಾರ, ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಮತ್ತು ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net