ಶಿಕ್ಷಕ ಸ್ನೇಹಿ ಪೆನಾಲ್‌ಗೆ ಬೆಂಬಲಿಸಿ

oppo_2
oppo_2
Published on

ಕಲಬುರಗಿ: ತಾಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದ ೨೦೨೫-೨೦೩೦ರ ಅವಧಿಯ ಆಡಳಿತ ಮಂಡಳಿಯ ಚುನಾವಣೆಗೆ ಶಿಕ್ಷಕರ ಸ್ನೇಹಿ ಪೆನಾಲ್‌ನ ೧೪ ಸದಸ್ಯರು ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಗೆದ್ದರೆ ಸಾಲದ ಮೊತ್ತವನ್ನು ೩ ಲಕ್ಷ ರೂ.ದಿಂದ ೫ಲಕ್ಷಕ್ಕೆ ರೂ.ಗೆ ಹೆಚ್ಚಳ ಸೇರಿ ಶಿಕ್ಷಕ ಸ್ನೇಹಿ ಕ್ರಮ ತೆಗೆದುಕೊಳ್ಳಲಿದ್ದು, ಪೆನಾಲ್‌ನವರಿಗೆ ಬೆಂಬಲಿಸಬೇಕು ಎಂದು ಶಿಕ್ಷಕರ ಸಂಘದ ಮುಖಂಡ ಕೆ.ಎಚ್.ಮಲ್ಲಿಕಾರ್ಜುನ ಹೇಳಿದರು.

ಸಂಘದ ಅಭಿವೃದ್ಧಿ, ಸದಸ್ಯರಿಗೆ ಅನುಕೂಲ ಕಲ್ಪಿಸಲು ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ಸಂಘದಲ್ಲಿ ದುಂಧುವೆಚ್ಚಕ್ಕೆ ಕಡಿವಾಣ ಹಾಕಿ, ಪಾರದರ್ಶಕತೆ ತರಲಾಗುವುದು. ಸ್ನೇಹಮಯ ವಾತಾವರಣ ನಿರ್ಮಿಸಲಾಗುವುದು. ಸಾಲ ಪಡೆದು ಕಟ್‌ಬಾಕಿದಾರ ಸದಸ್ಯರ ಮನವೊಲಿಸಿ ಹಣ ಹಿಂತಿರುಗಿಸಿ, ಸಂಘದ ಖಾತೆಗೆ ಭರಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿವಿಡೆಂಡ್ ಮೊತ್ತ ಹೆಚ್ಚಿಸಲಾಗುವುದು. ಬ್ಯಾಂಕ್‌ನಲ್ಲಿ ೬.೫೦ ಕೋಟಿ ರೂ. ಠೇವಣಿ ಇದ್ದು, ೨ ಕೋಟಿ ರೂ. ಸಾಲದ ಪ್ರಮಾಣವಿದೆ. ಸಾಲ ಪಡೆದವರ ಮನವೊಲಿಸಿ, ಹಣ ಜಮೆ ಮಾಡಿಸಲಾಗುವುದು. ಆರ್‌ಬಿಐ ನಿಯಮ ಅಧ್ಯಯನ ಮಾಡಿ ಷೇರುದಾರರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಸAಘದಲ್ಲಿ ಈ ಹಿಂದೆ ನಡೆದ ಅವ್ಯವಹಾರಗಳಿಗೆ ತಡೆ ನೀಡಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುವುದು. ಷೇರುದಾರರು ಅಕಾಲಿಕ ಮರಣ ಹೊಂದಿದರೆ ೧೫ ಸಾವಿರ ರೂ. ಅಂತ್ಯಕ್ರಿಯೆಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಉತ್ತರ, ದಕ್ಷಿಣ, ಕಮಲಾಪುರ ತಾಲೂಕು ವ್ಯಾಪ್ತಿಯಲ್ಲಿ ಸಂಘಕ್ಕೆ ೨೫೦೦ ಸದಸ್ಯರಿದ್ದು, ಕಟಬಾಕಿದಾರರು ಹೊರತುಪಡಿಸಿ ೧೭೫೦ ಸದಸ್ಯರು ಮತದಾನಕ್ಕೆ ಅರ್ಹರಿದ್ದಾರೆ. ವಿಠಲರಾವ ತುಕಾರಾಮ ಸುತ್ರಾವೆ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ ೧೯ರಂದು ಬೆಳಿಗ್ಗೆ ೯ರಿಂದ ಸಂಜೆ ೪ರ ವರೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದರು.

ಪ್ರಮುಖರಾದ ಪರಮೇಶ್ವರ ಓಕಳಿ, ಸುನೀಲ ಕುಲ್ಕರ್ಣಿ, ಶಿವಾನಂದ ಪಾಸೋಡಿ, ಮಿಟ್ಟೆಸಾಬ್, ನಂದಿನಿ ಸನಬಾಳ, ಮಹಾನಂದ ಹುಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net