

ಚನ್ನಮ್ಮ ಕಿತ್ತೂರು: ಕಿತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಶಾಸಕ ಬಾಬಾಸಾಹೇಬ್ ಪಾಟೀಲ ಮತ್ತು ಎಂ.ಎ್.ಜಕಾತಿ ಅವರ ಮಾರ್ಗದರ್ಶನದಲ್ಲಿ ಭಾನುವಾರ ಚುನಾವಣೆ ಜರುಗಿತು. ಮಹಿಳಾ ಮೀಸಲು ಕ್ಷೇತ್ರದಿಂದ ಶಶಿಕಲಾ ಬಾವಾನವರ (ಗಿರಿ), ನಂದಾ ಕಾಜಗಾರ, ಹಿಂದುಳಿದ (ಅ) ವರ್ಗದಿಂದ ಬಿ.ಎಸ್. ಪಡದಪ್ಪನವರ, ಹಿಂದುಳಿದ (ಬ) ವರ್ಗದಿಂದ ವಿ.ಜಿ.ದಾನಣ್ಣವರ ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯ ಕ್ಷೇತ್ರದಿಂದ ಡಿ.ಬಿ.ಘಟ್ಟದ, ಬಿ.ಎಸ್.ಹೊಂಗಲ, ಬಿ.ಪಿ.ಕೊಡಚವಾಡ, ಎಂ.ಎಸ್.ಕಲ್ಮಠ, ಎಂ.ಯು.ಕಡಬಿ, ಎಂ.ವಿ. ಕಮ್ಮಾರ, ವಿ.ಕೆ.ಹೊಳಿ, ಎಸ್.ಬಿ.ಶಿವನಗುಡಿ, ಎಚ್.ಬಿ.ಬೋಗುರ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಘವೇಂದ್ರ ಮುಂಡೇವಾಡಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಅಶೋಕ ಹುಬ್ಬಳ್ಳಿ ಆಯ್ಕೆಯಾಗಿದ್ದಾರೆ ಎಂದು ರಿಟನಿರ್ಂಗ್ ಆಫೀಸರ್ ಆರ್.ಎಲ್. ಮಕಾಂದಾರ ಘೋಷಿಸಿದರು.
ಎಂ.ಎ್.ಜಕಾತಿ, ಎಸ್.ಎಸ್.ಹುಲಮನಿ, ಕೆ.ಎ.ಜಾಯಕ್ಕನವರ, ವಿ.ಎಸ್.ನಂದಿಹಳ್ಳಿ, ಆರ್.ಎಸ್.ಹೊಳಿ, ಅಜಿತ ಹಣಜಿ, ಫಕೀರಪ್ಪ ಹೊಳಿ, ವಿ.ಎಸ್.ಬರಗಾಲಿ, ಎಸ್.ವೈ.ಕಾಶಪ್ಪನವರ, ಎಸ್.ಬಿ.ಕೋಟಿ, ಕೆ.ಜಿ.ಗಡಾದ, ಸಂಜು ಹುಬ್ಬಳ್ಳಿ, ಉಮೇಶ ಹಿರೇಮಠ, ಗುರುರಾಜ ಶೆಟ್ಟರ, ಕಾರ್ಯದರ್ಶಿ ಪ್ರಕಾಶ ಹಿರೇಮಠ, ಸಿಪಾಯಿ ಗುರುಸಿದ್ಧ ಕುರ್ಲಿ ಇತರರಿದ್ದರು.