ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು

20-svr-20
Published on

ಸವಣೂರ: ಕಲಿಕೆಗಿಂತ ಮೊದಲು ಶಿಲೆಯಾಗಿದ್ದ ಶಿಕ್ಷಣಾರ್ಥಿಯು ಗುರುವಿನ ಭೋದನೆ ಬಳಿಕ ಗುರುವಾಗಿ ಮಾರ್ಪಾಡಾಗುವುದರ ಹಿಂದೆ ದೊಡ್ಡ ಶಕ್ತಿ ಇದೆ ಎಂಬುದನ್ನು ಮರೆಯಬಾರದು ಎಂದು ದೊಡ್ಡ ಹುಣಸೇಕಲ್ಮಠದ ಶ್ರೀ ಚೆನ್ನಬಸವ ಸ್ವಾಮೀಜಿ ಹೇಳಿದರು.

ಶ್ರೀಗುರು ರಾಚೋಟೇಶ್ವರ ವಿದ್ಯಾ ಸಮಿತಿಯ ಶ್ರೀ ಚನ್ನಬಸವೇಶ್ವರ ಬಿಇ.ಡಿ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಕಲಿತ ವಿದ್ಯೆ ಎಂದಿಗೂ ನಷ್ಟವಾಗುವುದಿಲ್ಲ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಮುಂದೆ ಶಿಕ್ಷಕರಾಗುವ ಶಿಕ್ಷಣಾರ್ಥಿಗಳು ಸಮಾಜದಲ್ಲಿ ಸತ್ಪ್ರಜೆಗಳನ್ನು ನಿರ್ವಿುಸಬೇಕು ಎಂದರು.

ಬಿಇಒ ಎಂ.ಎಫ್. ರ್ಬಾ ಮಾತನಾಡಿ, ಕಲಿಕೆಯಲ್ಲಿ ಆಂತರಿಕ ಶಿಸ್ತು ಬೇಕು. ಬದಲಾದ ವ್ಯವಸ್ಥೆಯಲ್ಲಿ ಸಕಾರ್ರಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿವೆ. ಅದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪೈಪೋಟಿಯ ನಡುವೆ ಕಷ್ಟಕ್ಕೆ ಸಿಲುಕಿವೆ. ಅಂಥದ್ದರಲ್ಲಿ ಇಲ್ಲಿನ ಶಿಕ್ಷಣ ಸಂಸ್ಥೆ ಅಭಿನಂದನಾರ್ಹ ಕಾರ್ಯ ಮಾಡುತ್ತಿದೆ ಎಂದರು.

ಡಾ. ವೈ.ಬಿ. ತೊಂಡಿಹಾಳ ಮಾತನಾಡಿ, ಭೋದನೆಯಲ್ಲಿ ಮೌಲ್ಯವರ್ಧಿತ ಗುಣಮಟ್ಟವಿರಬೇಕು. ಆದರ್ಶ ಶಿಕ್ಷಣ ಮೌಲ್ಯಗಳು ಇರಬೇಕು. ನಮ್ಮಲ್ಲಿನ ಸಣ್ಣ ಪುಟ್ಟ ಲೋಪಗಳನ್ನು ಮಕ್ಕಳೆದುರು ತೋರ್ಪಡಿಸಬಾರದು ಎಂದರು.

ಪತ್ರಕರ್ತ ವೀರೇಶ ಪ್ರಳಯಕಲ್ಮಠ ಮಾತನಾಡಿ, ಇಂದಿನ ದಿನಗಳಲ್ಲಿ ಜ್ಞಾನಕ್ಕಿಂತ ದೊಡ್ಡ ಆಸ್ತಿ ಬೇರಾವುದಿಲ್ಲ. ಜ್ಞಾನ ಸಂಪಾದಿಸಿ ಉತ್ತಮವಾದುದನ್ನು ಇತರರಿಗೆ ತಿಳಿಸಬೇಕು ಎಂದರು.

ಬಿಇ.ಡಿ ಶಿಕ್ಷಣಾರ್ಥಿಗಳು ಅನುಭವ ಹಂಚಿಕೊಂಡರು. ಕಾಲೇಜ್ ಪ್ರಾಚಾರ್ಯ ಆರ್.ಎನ್. ತೊಂಡೂರ ಮಾತನಾಡಿದರು. ಜಯಾ ಆರ್. ಕಲ್ಮಠ, ಉಪನ್ಯಾಸಕರಾದ ನಾಗವೇಣಿ ಎಚ್.ಎಂ. ಕೆ.ಆರ್. ಕೋಪರ್ಡೆ, ಆರ್.ಎಚ್. ಅಗಡಿ, ಪ್ರಶಾಂತ ಎ.ಆರ್, ಪುಷ್ಪಾವತಿ, ರೂಪಾ, ಸಂಗೀತ ಶಿಕ್ಷಕ ಪರಮೇಶ್ವರ ಯಲವಿಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net