ಶಿಕ್ಷಕ ಯಾವತ್ತೂ ವಿದ್ಯಾರ್ಥಿಯಾಗಿರಬೇಕು

IMG_20230906_204520--04
Published on

ಚಿತ್ರದುರ್ಗ:ಪ್ರಶಸ್ತಿಗಳು ನಮ್ಮ ಸಾಧನೆಗಳನ್ನು ಆಧರಿಸಿರ ಬೇಕೆಂದು ರಾಜ್ಯಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಟಿ.ನಾಗಭೂಷಣ್ ಹೇಳಿ ದರು. ನಗರದ ರೋಟರಿ ಕ್ಲಬ್‌ನಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ಶಿಫಾರಸಿಂದ ಪಡೆದ ಪ್ರಶಸ್ತಿಗಳಿಗೆ ಬೆಲೆ ಇರದು. ಸಮಾಜ ನಿರ್ಮಾಣ ಶಕ್ತಿಯನ್ನು ಹೊಂದಿರುವ ಶಿಕ್ಷಕ ಯಾವತ್ತೂ ವಿದ್ಯಾರ್ಥಿಯಾಗಿರ ಬೇಕೆಂದರು.
ಯೋಗ ಗುರು ತಿಪ್ಪೇಸ್ವಾಮಿ ಮಾತನಾಡಿ,ನಿತ್ಯಯೋಗಭ್ಯಾಸ,ಮಿತ ಆಹಾರ ಸೇವನೆ ಮತ್ತು ಕಾಯಕ ಆರೋಗ್ಯವಂಥ ಜೀವನಕ್ಕೆ ಸಹ ಕಾರಿಯಾಗಿದೆ ಎಂದರು.ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜು,ಕಾರ‌್ಯದರ್ಶಿ ವಿಕ್ರಾಂತ್‌ಜೈನ್,ಸದಸ್ಯರಾದ ಎಸ್.ವಿರೇಶ್,ಶಿವಣ್ಣಕುರುಬರ ಹಳ್ಳಿ,ವೀರಭದ್ರಸ್ವಾಮಿ,ಮೈಲೇಶ್,ಡಾ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net