

ಮಲ್ಲಮ್ಮನ ಬೆಳವಡಿ: ಗುರು ಎಂದರೆ ಕೇವಲ ಬೋಧಿಸುವವರಲ್ಲ, ಅವರು ದಾರಿ ತೋರುವ ದಾರಿದೀಪ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಕುದುರಿ ಹೇಳಿದರು.
ಸಮೀಪದ ಮೂಗಬಸವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಾಲಕರ ಆಪ್ತ ಸಮಾಲೋಚನೆ ಸಭೆ ಹಾಗೂ ನಿವೃತ್ತಿ ಹೊಂದಿದ ಹಿರಿಯ ಶಿಕ್ಷಕ ಎ.ಜಿ.ಭಜಂತ್ರಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಭಾರತಿ ಪೂಜೇರ, ಮಲ್ಲಸರ್ಜ ಹುದ್ದಾರ, ಸಿ.ಎಸ್.ಕುಸಲಾಪುರ, ವಿವೇಕ ಚಚಡಿ, ದಾನಪ್ಪ ಕುಸಾಲಾಪುರ, ಬಿ.ಡಿ.ತಮ್ಮಣ್ಣವರ, ಮಂಜು ಅಬ್ಬಾಯಿ, ಬಸವರಾಜ ಹೊಂಡೆದ, ಮುಖ್ಯಶಿಕ್ಷಕ ಕೆ.ಜಿ.ಭಜಂತ್ರಿ, ಬಸವರಾಜ ಬೆಳವಡಿ ಇತರರಿದ್ದರು. ಬಿ.ಎಸ್.ಜಕಾತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಪೂಜೇರ ನಿರೂಪಿಸಿದರು. ಕಿರಣ ದಂಡಾವತಿಮಠ ಸ್ವಾಗತಿಸಿದರು. ಶಿಕ್ಷಕ ಎಸ್.ಎಂ.ಕೆಳಗಿನಮನಿ ವಂದಿಸಿದರು.