ಶಿಕಾರಿಪುರ: ಸ್ವಾತಂತ್ರ್ಯ ಜಾಥಾದಲ್ಲಿ ಹೆಜ್ಜೆ ಹಾಕಿದ ಕರು!

SKP WEB 1
Published on

ಶಿಕಾರಿಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜಾಥಾದ ಉದ್ದಕ್ಕೂ ಕರುವೊಂದು ಒಂದು ನಡೆದುಬಂದು ವಿಶೇಷ ಮೆರುಗು ನೀಡಿತು. ಸಮೀಪದ ಚುರ್ಚಿಗುಂಡಿಯಲ್ಲಿ ಶನಿವಾರ ಅಮೃತ ಮಹೋತ್ಸವದ ನಿಮಿತ್ತ ಸ್ಥಳೀಯರು, ಜನಪ್ರತಿನಿಧಿಗಳು ಮುರಾರ್ಜಿ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡ ಜಾಥಾ ಬಸ್ ನಿಲ್ದಾಣದಿಂದ ಹೊರಟು ಎ.ಕೆ.ಕಾಲನಿ ತಲುಪಿದಾಗ ಅಲ್ಲಿದ್ದ ಪ್ರಭಾಕರ್ ಎನ್ನುವವರ ಕರು  ಜಾಥಾ ಸೇರಿಕೊಂಡು ಮುಂದೆ ಹೊರಟಿತು. ಇದು ಜಾಥಾದಲ್ಲಿರುವವರಿಗೆ ಮತ್ತು ಗ್ರಾಮದ ಇಕ್ಕೆಲಗಳಲ್ಲಿ ಜಾಥಾ ನೋಡುತ್ತಿರುವವರಿಗೆ ಆಶ್ಚರ್ಯ ತಂದಿತ್ತು. ಜಾಥಾ ಮುಸ್ಲಿಂ ಕೇರಿ, ಕೊರಮರ ಕೇರಿ, ತಮಿಳು ಕೇರಿ, ಲಿಂಗಾಯತರ ಕೇರಿ ದಾಟಿ ಮತ್ತೆ ಬಸ್ ನಿಲ್ದಾಣ ತಲುಪುವ ತನಕ ಎಲ್ಲರೊಂದಿಗೆ ಕರು ಹೆಜ್ಜೆ ಹಾಕಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net