ಶಿಕಾರಿಪುರ: 31ನೇ ವರ್ಷದ ದಿಂಡಿ ಉತ್ಸವ ಸಂಪನ್ನ

WEBBBB SKP
Published on

ಶಿಕಾರಿಪುರ: ಸಿಂಪಿಗ ಸಮಾಜ ಶ್ರಮಿಕ ಸಮಾಜ ಮತ್ತು ಆಧ್ಯಾತ್ಮಿಕ ಚಿಂತನೆಗಳ ಸಮಾಜ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಗುರುವಾರ ತಾಲೂಕಿನ ತೊಗರ್ಸಿಯಲ್ಲಿ ಶ್ರೀ ಪಾಂಡುರಂಗ ರಕುಮಾಯಿ ದೇವಸ್ಥಾನದ 31ನೇ ವರ್ಷದ ದಿಂಡಿ ಉತ್ಸವ ಹಾಗೂ ನೂತನ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ,ಸಿಂಪಿ ಸಮಾಜದ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.

ಫೆ.27ಕ್ಕೆ ಯಡಿಯೂರಪ್ಪನವರು 79 ವಸಂತಗಳನ್ನು ಪೂರೈಸಿ 80ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅದೇ ದಿನ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಇದೊಂದು ಸಂಪರ್ಕ ಕ್ರಾಂತಿಯಾಗಲಿದೆ ಎಂದರು.

ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪೊನ್ನಂಪೇಟೆಯ ರಾಮಕೃಷ್ಣಾಶ್ರಮದ ಶ್ರೀ ತತ್ವ ರೂಪಾನಂದಜೀ ಸಾನ್ನಿಧ್ಯ ವಹಿಸಿದ್ದರು. ಆನವಟ್ಟಿ, ಸೊರಬ, ಸಾಗರ, ಭದ್ರಾವತಿ ಮುಂತಾದ ಕಡೆಗಳಿಂದ ಸಂತರು ಆಗಮಿಸಿದ್ದರು. ರಾಜಬೀದಿಯಲ್ಲಿ ಶ್ರೀ ಪಾಂಡುರಂಗ ರಖುಮಾಯಿ ದೇವರ ಪಲ್ಲಕ್ಕಿ ಉತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net