ಶಿಂಗಟಾಲೂರ ಗ್ರಾಪಂಗೂ ಒಲಿಯಿತು ಪುರಸ್ಕಾರ

1MDG2
Published on

ಮುಂಡರಗಿ: ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ತ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್ ಇಲಾಖೆಯಿಂದ ಕೊಡಮಾಡುವ 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಶಿಂಗಟಾಲೂರ ಗ್ರಾಪಂ ಆಯ್ಕೆಯಾಗಿದೆ. ಶಿಂಗಟಾಲೂರ, ಶೀರನಹಳ್ಳಿ, ಗಂಗಾಪುರ ಗ್ರಾಮಗಳನ್ನು ಒಳಗೊಂಡ ಶಿಂಗಟಾಲೂರ ಗ್ರಾಪಂಗೆ ಸರ್ಕಾರದಿಂದ 2017-18ರಲ್ಲೂ ಗಾಂಧಿ ಗ್ರಾಮ ಪುರಸ್ಕಾರ ದೊರೆತಿತ್ತು. ಮಂಜುನಾಥ ಮುಂಡವಾಡ ಗ್ರಾಪಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಲ್ಲ ಸದಸ್ಯರು, ಅಧಿಕಾರಿಗಳು ಒಗ್ಗೂಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ಅದರ ಫಲವಾಗಿ ಈಗ ಮತ್ತೆ ಪುರಸ್ಕಾರ ಒಲಿದು ಬಂದಿದೆ. ಇದರಿಂದ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಮುಂಡವಾಡ, ಮಾಜಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಯಲ್ಲಿ ಸಂಭ್ರಮ ಮನೆ ಮಾಡಿದೆ.

ಗ್ರಾಪಂ ಸರ್ವ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಸಹಕಾರದಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಿದ್ದೇವೆ. ಕುಡಿಯುವ ನೀರು, ಸ್ವಚ್ಛತೆ, ಬೀದಿದೀಪ ನಿರ್ವಹಣೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಅವುಗಳನ್ನು ಪರಿಗಣಿಸಿ 2017-18ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಬಂದಿತ್ತು. ಈಗ ಮತ್ತೆ ನಮ್ಮ ಗ್ರಾಪಂಗೆ ಪುರಸ್ಕಾರ ಬಂದಿರುವುದು ಸಂತಸವಾಗಿದೆ. ಜನಪರ ಕೆಲಸ ಮಾಡಿರುವುದು ಸಾರ್ಥಕವಾಗಿದೆ.| ಮಂಜುನಾಥ ಮುಂಡವಾಡ ಶಿಂಗಟಾಲೂರ ಗ್ರಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net