ಶಾಸನಗಳೇ ಅಧಿಕೃತ ದಾಖಲೆ

13 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಸನ ಎಂದರೆ ನಿಯಮ, ವಿಧಿ, ಆಜ್ಞೆ ಇತರ ಅರ್ಥಗಳು ಇರುವುದುಂಟು. ಶಾಸನಗಳಲ್ಲಿ ದತ್ತಿದಾನ ಶಾಸನ, ವೀರಮರಣ ಶಾಸನ, ಮುನಿಗಳು ಸಲ್ಲೇಖನಾ ವೃತ ತೆಗೆದುಕೊಂಡು ಮರಣ ಹೊಂದಿದ ಶಾಸನಗಳು ಇರುವುದನ್ನ ಕಾಣುತ್ತೇವೆ. ಇವುಗಳಲ್ಲಿ ಶಿಲಾಶಾಸನ ಮತ್ತು ತಾಮ್ರಶಾಸನಗಳು ಪ್ರಮುಖವಾಗಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಜೆ. ಎಂ. ನಾಗಯ್ಯ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಪಾರ್ವತೆಮ್ಮ ಬ. ಹೊಂಬಳ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನ ಹಾಗೂ ಶಾಸನಗಳಲ್ಲಿ ಗ್ರಂಥಾಲಯಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸನಗಳನ್ನು ಬಿಟ್ಟು ತಾಳೆಗರಿ, ಬೂರ್ಜ ಪತ್ರ, ಕೋರಿ ಕಾಗದ ಬಳಸಿ ಗ್ರಂಥಗಳನ್ನು ಬರೆಯಲಾಗಿದೆ. ಕೈಯಿಂದ ಬರೆದದ್ದು ಹಸ್ತಪ್ರತಿ ಅನಿಸಿಕೊಂಡಿತು. ಇವುಗಳನ್ನ ಬರೆಯವುದಕ್ಕೆ ಹವ್ಯಾಸಿ ಲಿಪಿಕಾರರು, ವೃತ್ತಿ ಲಿಪಿಕಾರರು ಇದ್ದರು. ಶಾಸನಗಳು ನಮಗೆ ಒಂದೇ ಪ್ರತಿಯಲ್ಲಿ ಸಿಕ್ಕರೆ, ಗ್ರಂಥಗಳು ಹಲವು ಪ್ರತಿಗಳಲ್ಲಿ ಸಿಗುತ್ತವೆ. ಅಧಿಕೃತ ದಾಖಲೆಗಳನ್ನು ಒದಗಿಸುವಂಥವುಗಳೇ ಶಾಸನಗಳಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿದರು. ಕವಿವಿಯ ಪ್ರೊ. ಎಸ್.ಎಸ್. ಬಸವನಾಳ ಗ್ರಂಥಾಲಯ ಮುಖ್ಯಸ್ಥೆ ಡಾ. ಅನುಪಮಾ ಜೋಶಿ ಅವರನ್ನು ಸನ್ಮಾನಿಸಲಾಯಿತು. ಜಿ.ಬಿ.ಹೊಂಬಳ, ಗುರು ಹಿರೇಮಠ, ಡಾ. ಸಂಜೀವ ಕುಲಕರ್ಣಿ, ಡಾ. ಶೈಲಜಾ ಅಮರಶೆಟ್ಟಿ, ಬಸವಪ್ರಭು ಹೊಸಕೇರಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಡಿ.ಎಂ. ಹಿರೇಮಠ, ಬಿ.ಎಸ್. ಶಿರೋಳ, ಸೋಮನಗೌಡ ಪಾಟೀಲ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net