

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನಡೆಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಬುಧವಾರ ನಗರದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು.
ಮೂಡಿಗೆರೆಯಲ್ಲಿ ಸಾರ್ವಜನಿಕ ಗಣಪತಿ ಸಮಿತಿಯವರು ಹಮ್ಮಿಕೊಂಡಿರುವ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಹಲವು ಪ್ರಕರಣಗಳನ್ನು ಹೊಂದಿರುವ ಶ್ರೀ ರಾಮಸೇನೆಯ ರಾಷ್ಟಿçÃಯ ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊAಡಿರುವುದನ್ನು ಪ್ರಗತಿಪರ ಸಂಘಟನೆ ಮುಖಂಡರು ಖಂಡಿಸಿದರು.
ಶಾಸಕಿಯಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ, ನಾನು ಹಿಂದೂ ದಲಿತ ಎಂದು ಹೇಳಿಕೆ ನೀಡುವ ಮೂಲಕ ಮತದಾರರನ್ನು ದಾರಿತಪ್ಪಿಸುವ ಕೆಲಸವನ್ನು ಶಾಸಕರು ಕೈಬಿಡಬೇಕು. ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಸಮರ್ಥಿಸಿಕೊಳ್ಳುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಶಾಸಕಿ ನಯನಾ ಅವರ ನಡೆಯನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುವುದನ್ನು ಕೈಬಿಟ್ಟು ಅವರಿಗೆ ಬುದ್ದಿಹೇಳುವ ಕೆಲಸನ್ನು ಮಾಡಬೇಕು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರಿAದ ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕಿಯಾಗಿ ನಯನಾ ಆಯ್ಕೆಯಾಗಿದ್ದರು. ಈಗ ನಾನು ಹಿಂದೂ ಎನ್ನುವ ಮೂಲಕ ಪ್ರಗತಿಪರ ಸಂಘಟನೆ ಮುಖಂಡರಿಗೆ ಮುಜುಗರವನ್ನುಂಟುಮಾಡಿದ್ದಾರೆ ಎಂದು ವಿವಿಧ ಪಕ್ಷ ಮತ್ತು ಸಂಘಟನೆಗ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳು ಎಂದು ಹೇಳಿಕೊಳ್ಳುವವರು ಮೂಡಿಗೆರೆ ಕ್ಷೇತ್ರದಲ್ಲಿ ಈಗಲೂ ಅಸ್ಪೃಶ್ಯತೆಯನ್ನು ಆಚರಿಸುತ್ತಾರೆ. ದಲಿತರನ್ನು ಅವರ ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಪರಿಸ್ಥಿತಿ ಹೀಗಿದ್ದರೂ ಯಾವ ಧೈರ್ಯದಲ್ಲಿ ನಾನು ಹಿಂದೂ ಎಂದು ಹೇಳಿಕೊಂಡಿದ್ದಾರೆ ಎಂಬುದಕ್ಕೆ ಶಾಸಕರೇ ಮುಂದಿನ ದಿನಗಳಲ್ಲಿ ಕ್ಷೇತ್ರದ ಮತದಾರರಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಸಿಪಿಐ(ಎಂ.ಎಲ್.)ರೆಡ್‌ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಕಾರ್ಯಾಧ್ಯಕ್ಷ ಎಂ.ಸಿ.ಬಸವರಾಜ್, ಜೆಡಿಎಸ್ ಮುಖಂಡ ಮಂಜಪ್ಪ, ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ಜಿಲ್ಲಾಪ್ರಧಾನ ಸಂಚಾಲಕ ಬಾಚಿಗನಹಳ್ಳಿ ಮಂಜಯ್ಯ, ದಲಿತ ಮುಖಂಡ ಯಲಗುಡಿಗೆ ಹೊನ್ನಪ್ಪ, ರೈತ ಮುಖಂಡ ಗುರುಶಾಂತಪ್ಪ, ಕಾಂಗ್ರೆಸ್ ತಾಲೂಕು ವಕ್ತಾರ ಮರಗುಂದ ಪ್ರಸನ್ನ, ವಿವಿಧ ಪಕ್ಷ ಮತ್ತು ಸಂಘಟನೆ ಮುಖಂಡರಾದ ಮಂಜುನಾಥ, ಭರತ್ ಇದ್ದರು.