

ಚಿತ್ರದುರ್ಗ: ಚಳ್ಳಕೆರೆ, ಮೊಳಕಾಲ್ಮುರಿಗೆ ಪ್ರತ್ಯೇಕ ವಿದ್ಯುತ್ ವಿಭಾಗ ಮಂಜೂರಾತಿ ನೀಡಿದರೆ ಅನುಕೂಲವಾಗಲಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಜಿಪಂ ಸಭಾಂಗಣದಲ್ಲಿ ನಡೆದ ಬೆಸ್ಕಾಂ ಕುಂದು-ಕೊರತೆ ಸಭೆಯಲ್ಲಿ ಮನವಿ ಮಾಡಿದರು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಡುವೆ ಕೆಲಕಾಲ ವಾಗ್ವಾದ ನಡೆಸಿದರು.
ನೀವು ಹೇಳಿದಂತೆ ಮಾಡಿದರೆ ಹಿರಿಯೂರು ವಿಭಾಗ ರದ್ದಾಗಿ, ಅದನ್ನೇ ಚಳ್ಳಕೆರೆಗೆ ಸ್ಥಳಾಂತರಿಸಿದರೂ ಹಿರಿಯೂರಿಗೆ ತೊಂದರೆ ಉಂಟಾಗಲಿದೆ ಎಂದು ಸುಧಾಕರ್ ಕಳವಳ ವ್ಯಕ್ತಪಡಿಸಿದರು.