ಶಾಸಕರು ಅಧಿಕಾರದ ಬೆನ್ನತ್ತಿ ಹೋಗಬಾರದು

h19-kims
Published on

ಹುಬ್ಬಳ್ಳಿ: ಯಾವುದೇ ಶಾಸಕರಾಗಲಿ ಅಧಿಕಾರದ ಬೆನ್ನತ್ತಿ ಹೋಗಬಾರದು. ನನ್ನನ್ನು ಮಂತ್ರಿ ಮಾಡಿ, ಮುಖ್ಯಮಂತ್ರಿ ಮಾಡಿ ಎಂದು ದುಂಬಾಲು ಬೀಳಬಾರದು. ಅಧಿಕಾರವೇ ನಮ್ಮನ್ನು ಹುಡುಕಿಕೊಂಡು ಬರಬೇಕು ಎಂದು ಎಂಎಲ್​ಸಿ ಪ್ರದೀಪ ಶೆಟ್ಟರ್ ಅವರು, ಪರೋಕ್ಷವಾಗಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಟಾಂಗ್ ಕೊಟ್ಟರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಹುದೊಡ್ಡ ಪಕ್ಷ. ಆರು ಬಾರಿ ಶಾಸಕರಾದವರು ಮಂತ್ರಿಯಾಗದೇ ಕುಳಿತಿದ್ದಾರೆ. ರೂಟ್ ಲೆವೆಲ್ ಶಾಸಕರು ಹಾಗೂ ಕಾರ್ಯಕರ್ತರಿಂದ ಪಕ್ಷ ಬೆಳೆದಿದೆ. 30-40 ವರ್ಷ ಪಕ್ಷಕ್ಕಾಗಿ ದುಡಿದವರು ಬಹಳಷ್ಟು ಜನರು ಇದ್ದಾರೆ. ಪಕ್ಷವೇ ನಮ್ಮನ್ನು ಗುರುತಿಸಿ ಅಧಿಕಾರ ಕೊಡಬೇಕು. ನಾವು ಪಕ್ಷದ ಹೆಸರಿನಿಂದ ಗುರುತಿಸಿಕೊಳ್ಳದೇ, ಪಕ್ಷವೇ ನಮ್ಮನ್ನು ಗುರುತಿಸುವಂತಾಗಬೇಕು. ಎಲ್ಲರಿಗೂ ಅಧಿಕಾರ ಸಿಗುವುದಿಲ್ಲ. ಜಾತಿ, ಜಿಲ್ಲಾವಾರು ಬಲಾಬಲ ನೋಡಿ ಅಧಿಕಾರ ನೀಡುವುದು ಸಾಮಾನ್ಯ. ಜನಸಂಘದಿಂದಲೂ ಅನೇಕರು ಬಿಜೆಪಿಗೆ ಬಂದಿದ್ದಾರೆ. ಅವರೆಲ್ಲ ಸುಮ್ಮನಿದ್ದಾರೆ. ಅಧಿಕಾರದ ಹಪಾಹಪಿ ಅವರಿಗಿಲ್ಲ. ಒಂದೆರಡು ಬಾರಿ ಶಾಸಕರಾದವರು ಈ ರೀತಿ ಕನಸು ಕಾಣಬಾರದು ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net