ಶಾಸಕರಿಗೆ ಅರೆಬರೆ ಅನುದಾನ

13 HHR P 05
ಅರಹತೊಳಲಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕಿ ಶಾರದಾ ಪೂರ್ಯಾನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು. ಜಿ.ಪಿ.ಶಿವಕುಮಾರ್, ಪಾಲಾಕ್ಷಪ್ಪ, ಸತೀಶ್ ಇದ್ದರು.
Published on

ಹೊಳೆಹೊನ್ನೂರು:ಶಾಸಕರಿಗೆ ಸಿಗುತ್ತಿರುವ ಅರೆಬರೆ ಅನುದಾನದಲ್ಲಿ ಗ್ರಾಮಾಂತರ ಕ್ಷೇತ್ರದ ಹಳ್ಳಿಗಳಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದರು. ಅರಹತೊಳಲು, ವಡ್ಡರಹಟ್ಟಿ ಮತ್ತು ಭಗವತಿಕೆರೆ ಗ್ರಾಮಗಳಲ್ಲಿ ಸೋಮವಾರ 1.17ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಅರಹತೊಳಲು ಎಕೆ ಕಾಲನಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆ ನಿರ್ಮಾಣ ಕಾಮಗಾರಿಗೆ 25 ಲಕ್ಷ, ಸರ್ಕಾರಿ ಪ್ರೌಢಶಾಲೆ ಮೂರು ನೂತನ ಕೊಠಡಿಗಳಿಗೆ 49 ಲಕ್ಷ, ಅರಹತೊಳಲು ರುದ್ರಭೂಮಿಗೆ ಹೋಗುವ ರಸ್ತೆ 14 ಲಕ್ಷ, ವಡ್ಡರಹಟ್ಟಿಯ ಬಂಜಾರ ಕಾಲನಿಯ ರಸ್ತೆ ಕಾಮಗಾರಿಗೆ 10 ಲಕ್ಷ ಮತ್ತು ಭಗವತಿಕೆರೆ ಗ್ರಾಮದಲ್ಲಿ 19 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿ ಆಗಲಿವೆ ಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಸುಧಾ, ಎನ್.ಟಿ.ಸಂಗನಾಥ್, ಡಿ.ಎಚ್.ಪಾಲಾಕ್ಷಪ್ಪ, ಜಿ.ಪಿ.ಶಿವಕುಮಾರ್, ಕೆ.ಆರ್.ಸತೀಶ್, ಜಿ.ಎನ್.ಪರಶುರಾಮ್, ಸಿದ್ಲೀಪುರ ಸತೀಶ್, ಬಿ.ಮಹೇಶ್, ಎನ್.ದೊರೆ, ಎಲ್.ಎಸ್.ರವಿಕುಮಾರ್, ಎಸ್.ಪಿ.ಜಯದೇವಪ್ಪ, ಎ.ಎಂ.ಮಲ್ಲಿಕಾರ್ಜುನ್, ಪರಮೇಶ್ವರಪ್ಪ, ಶಕುಂತಲಾ, ಎಂ.ಸಿ.ಮಂಜುನಾಥ, ಧನಂಜಯಚಾರ್ ಇತರರಿದ್ದರು.

ಕ್ಷೇತ್ರ ವಿಸ್ತೀರ್ಣದಲ್ಲಿ ದೊಡ್ಡದಾಗಿರುವುದರಿಂದ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ರಾಜ್ಯ ಸರ್ಕಾರದಿಂದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ದೊರೆಯುತ್ತಿಲ್ಲ. ನಮ್ಮ ಕ್ಷೇತ್ರದ ಜನರೂ ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗುವುದು. ಶಾರದಾ ಪೂರ್ಯಾನಾಯ್ಕ, ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net