

ಯಾದಗಿರಿ: ದೇಶಕ್ಕೆ ಅನ್ನ ನೀಡುವ ರೈತರ ಜತೆ ನಮ್ಮ ಸರ್ಕಾರ ಸದಾ ಇದೆ. ರೈತರು ಬೆಳೆದ ಬೆಳೆ ವಿದ್ಯುತ್ ಸಮಸ್ಯೆಯಿಂದ ಹಾಳಾಗಬಾರದು ಎಂಬ ಕಾರಣಕ್ಕಾಗಿ ಸರ್ಕಾರ ಡಿಸೇಲï ಪಂಪ್‌ಸೆಟ್ ನೀಡುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಹೇಳಿದರು. ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಯಾದಗಿರಿ ತಾಲೂಕಿನ 50 ರೈತ ಫಲಾನುಭವಿಗಳಿಗೆ ಕೃಷಿ ಡಿಸೇಲï ಪಂಪ್‌ಸೆಟ್ ವಿತರಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ರೈತರು ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುತ್ತಿz್ದÁರೆ. ಇದು ಈಗ ಅವರ ಸಹಾಯಕ್ಕೆ ಬರುತ್ತದೆ ಎಂದರು. ಮುದ್ನಾಳ್,ಅಬ್ಬೆತುಮಕೂರ, ಭೀಮನಗರದ ರೈತರು ಭಾಗವಹಿಸಿದ್ದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ, ಕೃಷಿ ಅಧಿಕಾರಿ ಯಾಮರೆಡ್ಡಿ ಮುಂಡಾಸ್, ವೆಂಕಟೇಶ ಹಿರೆನೂರï ಸೇರಿದಂತೆ ಇತರರಿದ್ದರು.