

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕು ಸಭಾಂಗಣದಲ್ಲಿ ಡಿ.06 ರಂದು ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ಕಾರ್ಯಕ್ರಮಕ್ಕೆ ಶಾಸಕ ಗಣೇಶ್ ಪ್ರಸಾದ್ ಅವರು ತಡವಾಗಿ ಆಗಮಿದ್ದರು, ಇದನ್ನು ಪ್ರಶ್ನಿಸಿದ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಪ ಪ್ರಧಾನ ಸಂಚಾಲಕ ಬೆಳಚಲವಾಡಿ ಚಿಕ್ಕಣ್ಣ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಪರಿನಿಬ್ಬಾಣ ಕಾರ್ಯಕ್ರಮ ಬೆಳಿಗ್ಗೆ 10.30 ಕ್ಕೆ ನಿಗದಿಮಾಡಿದ್ದು, ಶಾಸಕರು 2 ಘಂಟೆ ತಡವಾಗಿ ಬಂದರು ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮನೆಯ ಕೆಲಸ ಬಿಟ್ಟು ಇಲ್ಲಿ ಬರಬೇಕಾ ನನ್ನ ಇಷ್ಷ ನೀನು ಯಾರು ಕೇಳಲು ಎಂದು ನನ್ನ ಮೇಲೆ ಹಲ್ಲೆ ಮಾಡಲು ಬಂದರು ಪೊಲೀಸರು ನನ್ನನ್ನು ಸಭಂಗಣದಿಂದ ಹೊರ ಹಾಕಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆ ಯಲ್ಲಿ ದೂರು ನೀಡಲಾಗಿದೆ. ಆದರೂ ಪ್ರಕರಣ ದಾಖಲಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಡ್ನಾಕೂಡು ಪ್ರಕಾಶ್ ಮಾತನಾಡಿ, ಶಾಸಕ ಗಣೇಶ್ ಪ್ರಸಾದ್ ಅವರು ಹೇಳುತ್ತಾರೆ ನನ್ನನ್ನು ದಲಿತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ ಆದರೆ ಗಣೇಶ್ ಪ್ರಸಾದ್ ಅವರ ನಡತೆಯಲ್ಲಿ ದಲಿತ ವಿರೋಧಿ ನೀತಿ ಇದೆ. ಅದನ್ನು ತಿದ್ದುಕೊಳ್ಳಬೇಕು. ಶಾಸಕರಾದ ಮೇಲೆ ದಲಿತರಿಗೆ ಅವಮಾನ ಮಾಡುವ ಮೂರ್ನಾಲ್ಕು ಪ್ರಕರಣ ದಾಖಲಾಗಿದೆ ಇದನ್ನು ತಿದ್ದುಕೊಳ್ಳಿ ಎಂದು ಹೇಳುತ್ತಿದ್ದೇವೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬರುವುದನ್ನು ಕಲಿತುಕೊಳ್ಳಿ ಎಂದು ಹೇಳಿದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರ, ಮುಖಂಡರಾದ ಬಸವರಾಜು, ಕಬ್ಬಳ್ಳಿ ರೇವಣ್ಣ ಹಾಜರಿದ್ದರು.