ಶಾಸಕರ ಮನೆ ಆವರಣದ ಶ್ರೀಗಂಧ ಮರ ಕಳ್ಳತನಕ್ಕೆ ಯತ್ನ

Screenshot_20201114-110339_WhatsApp
Published on

ವಿಜಯಪುರ: ಶಾಸಕ ದೇವಾನಂದ ಚವಾಣ ಮನೆಯ ಆವರಣದಲ್ಲಿನ ಗಂಧದ ಮರ ಕಳ್ಳತನಕ್ಕೆ ಯತ್ನ ನಡೆದಿದೆ.

ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವಾಣ ಅವರ ಮನೆಯ ಆವರಣದಲ್ಲಿ ಶನಿವಾರ ನಸುಕಿನ ಜಾವ ಈ ಘಟನೆ ನಡೆದಿದೆ.

ಗಂಧದ ಮರ ಕತ್ತರಿಸುವ ವೇಳೆ ಮನೆಯವರು ಎಚ್ಚರಗೊಳ್ಳುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದಾರೆ.

ಬುಡಸಮೇತ ಕತ್ತರಿಸಿದ ಗಂಧದ ಮರವನ್ನು ಬಿಟ್ಟು ಓಡಿಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net