ಶಾಸಕರ ಪ್ರಯತ್ನದಿಂದ ಆಸ್ಪತ್ರೆಗೆ ಹೈಟೆಕ್ ಸೌಲಭ್ಯ

Oplus_1024
Oplus_1024
Published on

ಅಥಣಿ: ಶಾಸಕರ ಪ್ರಯತ್ನದಿಂದ ಅಥಣಿ ಸರ್ಕಾರಿ ಆಸ್ಪತ್ರೆಗೆ ಹೈಟೆಕ್ ಸೌಲಭ್ಯ ದೊರೆತಿವೆ. ಇದು ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲು ಕಾರಣವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಹೇಳಿದರು.

ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ಕಾರಿ ಆಸ್ಪತ್ರೆಗೆ ದಿನದ ೨೪ ಗಂಟೆಯ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿ, ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಶಾಸಕ ಲಕ್ಷ್ಮಣ ಸವದಿ ಸರ್ಕಾರದಿಂದ ಅನುದಾನ ಪಡೆಯುವ ಮೂಲಕ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಸೌಲಭ್ಯ ಒದಗಿಸಿದ್ದಾರೆ. ಡಯಾಲಿಸಿಸ್, ಆಕ್ಸಿಜನ್ ಘಟಕ, ಹೈಟೆಕ್ ಪ್ರಯೋಗಾಲಯ, ಆಂಬುಲೆನ್ಸ್ ಸೇವೆ, ಶುದ್ಧ ಕುಡಿಯುವ ನೀರಿಗಾಗಿ ಬೋರ್‌ವೆಲ್ ಮತ್ತು ಜಲಶುದ್ಧೀಕರಣ ಘಟಕ, ದಿನದ ೨೪ ಗಂಟೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ ಎಂದರು.

ಹೆಸ್ಕಾಂ ಉಪವಿಭಾಗದ ಕಾರ್ಯನಿವಾರ್ಹಕ ಅಭಿಯಂತ ಜಿ.ವಿ.ಸಂಪಣ್ಣವರ ಮಾತನಾಡಿ, ಹೆಸ್ಕಾಂ ಇಲಾಖೆಯಿಂದ ಸಾರ್ವಜನಿಕರಿಗೆ ಇರುವ ವಿದ್ಯುತ್ ಸೌಲಭ್ಯ ಮತ್ತು ರೈತರಿಗೆ ಇರುವ ಕುಸುಮ ಯೋಜನೆಯ ಸೋಲಾರ್ ಪಂಪ್‌ಸೆಟ್ ಸರ್ಕಾರದ ಸಬ್ಸಿಡಿ ದರದಲ್ಲಿ ಪಡೆದುಕೊಳ್ಳುವಂತೆ ಕರೆ ನೀಡಿದರು.

ಹೆಸ್ಕಾಂ ಇಲಾಖೆ ಸಹಾಯಕ ಅಭಿಯಂತ ಸಿ.ಆರ್.ಗುರುಸ್ವಾಮಿ, ಎ.ಎಸ್.ಮಾಕಾಣಿ, ಆರ್.ವೈ.ಗುಗ್ರಿ, ಶಾಖಾಧಿಕಾರಿಗಳಾದ ಮಹಾಂತೇಶ ಅಂಬೋಳಿ, ಬಿ.ಜಿ.ಸನದಿ, ಎಸ್.ಎ.ಪಾರ್ಥನಹಳ್ಳಿ, ಬಿ.ಎಸ್.ಸನದಡ್ಡಿ, ಅಶೋಕ ವಾಲೀಕಾರ, ಪಿ.ಬಿ.ಸತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net