ಶಾಸಕ ಸವದಿ ಬೆಂಬಲಿತರು ಅವಿರೋಧ ಆಯ್ಕೆ

4athanigramin1
ನಂದಗಾಂವ ಗ್ರಾಪಂಗೆ ಅಧ್ಯಕ್ಷರಾಗಿ ಶ್ರೀಶೈಲ ಕಾಂಬಳೆ, ಉಪಾಧ್ಯೆಯಾಗಿ ಶೋಭಾ ಕಲಾಲ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಸತ್ಕರಿಸಲಾಯಿತು. ಬಸಪ್ಪ ಗುಮಟಿ, ಪುಷ್ಪಕಕುಮಾರ ಪಾಟೀಲ, ಬಾಬು ಗಲಗಲಿ ಇತರರಿದ್ದರು.
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ನಂದಗಾಂವ ಗ್ರಾಪಂಗೆ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ಲಕ್ಷ$್ಮಣ ಸವದಿ ಬೆಂಬಲಿತರಾದ ಶ್ರೀಶೈಲ ಕಾಂಬಳೆ ಅಧ್ಯಕ್ಷರಾಗಿ, ಶೋಭಾ ಕಲಾಲ ಉಪಾಧ್ಯೆಯಾಗಿ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಶಿವಲಾಲ ಚವ್ಹಾಣ, ಸಹಾಯಕರಾಗಿ ಪಿಡಿಒ ವಿನೋದ ಪಾಯಕ ಕಾರ್ಯನಿರ್ವಹಿಸಿದರು. ಮುಖಂಡರಾದ, ಬಸಪ್ಪ ಗುಮಟಿ, ಪುಷ್ಪಕಕುಮಾರ ಪಾಟೀಲ, ಬಾಬು ಗಲಗಲಿ, ಶಾಂತಿನಾಥ ನಂದೇಶ್ವರ, ಅಣ್ಣಪ್ಪ ಕಾರ್ತಾಳ, ನೇಮಣ್ಣ ದರೂರ, ಗ್ರಾಪಂ ಸದಸ್ಯರಾದ ಅರುಣ ರಾಜಮಾನೆ, ಮಹಾಂತೇಶ ಗುಮಟಿ, ಸುರೇಖಾ ಹುಡೇದ, ಸದಾಶಿವ ಈಚೇರಿ, ಭಾರತಿ ನಾಯಿಕ, ದೇವಕಿ ಕುಂಬಾರ, ಅಜೀತ ಶಿರಹಟ್ಟಿ, ಶ್ರೀಧರ ಪೂಜಾರಿ, ಪ್ರಕಾಶ ಸಕಲಕನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net