ಶಾಸಕ ಸಲಗರ ವಿರುದ್ಧ ಕ್ರಮಕ್ಕೆ ಒತ್ತಾಯ

Oplus_16777216
Oplus_16777216
Published on

ಬಸವಕಲ್ಯಾಣ: ಮಾಜಿ ಎಂಎಲ್ಸಿ ವಿಜಯಸಿಂಗ್ ಅವರ ಕುರಿತು ಸುಳ್ಳು ಅರೋಪ ಮಾಡಿ, ಏಕ ವನಚನದಲ್ಲಿ ಹಗುರವಾಗಿ ಮಾತನಾಡಿರುವ ಶಾಸಕ ಶರಣು ಸಲಗರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್‌ನಿAದ ಶುಕ್ವ9ರ ರಾತ್ರಿ ಗಾಂಧಿ ವೃತ್ತದ ಬಳಿ ಪೊಲೀಸ್ ಠಾಣೆ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು.

ಅಕ್ರಮವಾಗಿ ಜಾನುವಾರುಗಳನ್ನು ಕಟ್ಟಿ ಹಾಕಲಾಗಿದೆ ಎಂದು ಶುಕ್ರವಾರ ಬೆಳಗ್ಗೆ ತಾವೇ ಸ್ಥಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಶಾಸಕರು ವಿಜಯಸಿಂಗ್ ಅವರ ಕುರಿತು ಆಡಿದ ಮಾತಿಗೆ ಪಕ್ಷದ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವ ಬದಲು ಶಾಸಕ ಸಲಗರ ಅವರು ತಾವೇ ಮನೆ-ಮನೆಗೆ ಹೋಗುವ ಮೂಲಕ ಕೋಮು ಭಾವನೆಗೆ ಪ್ರಚೋದನೆ ನೀಡುವುದು ಸೂಕ್ತವಲ್ಲ. ವಿಜಯಸಿಂಗ್ ವಿರುದ್ಧ ಏಕವಚನದಲ್ಲಿ ಮಾತನಾಡಿವುದನ್ನು ಖಂಡಿಸುತ್ತೇವೆ. ಯಾರು ಸಹ ಕೋಮು ಸೌಹಾರ್ಧತೆಗೆ ಧಕ್ಕೆ ತರುವಂಥ ಮಾತು ಆಡಲು ಹೋಗಬಾರದು ಎಂದರು.

ಮುಖಂಡರಾದ ಅರ್ಜುನ ಕನಕ, ಮನೋಹರ್ ಮೈಸೆ, ಸುರೇಶ ಮೋರೆ, ಜಿಪಂ ಮಾಜಿ ಉಪಾದ್ಯಕ್ಷೆ ಲತಾ ಹಾರಕೂಡೆ, ಜಿಪಂ ಮಾಜಿ ಸದಸ್ಯ ಆನಂದ ಪಾಟೀಲ್, ರವಿ ಕೊಳಕುರ, ಶಿವಕುಮಾರ ಶಟಗಾರ, ಸವಿತಾ ಕಾಂಬಳೆ ಮಾತನಾಡಿದರು.

ನಗರ ಸಭೆ ಅಧ್ಯಕ್ಷ ಎಂಡಿ ಸಗೀರೋದ್ದಿನ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮೀರ್ ಅಜರಲಿ ನವರಂಗ, ಪ್ರಮುಖರಾದ ಬಸವರಾಜ ಸ್ವಾಮಿ, ಸಂಜಯಸಿಂಗ್ ಹಜಾರಿ, ಯುವರಾಜ ಭೆಂಡೆ, ರವಿ ಬೋರಾಳೆ, ಶಿವಕಕುಮಾರ ಬಿರಾದಾರ, ಜಗನ್ನಾಥ ಪಾಟೀಲ್, ಸಂತೋಷ ಗುತ್ತೇದಾರ, ಶರಣು ಅಲಗೂಡ, ಬಸವರಾಜ ಬಿರಾದಾರ ಇತರರಿದ್ದರು.

ದೂರು: ಶಾಸಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದಿಂದ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು. ಜಿಲ್ಲಾ ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಹಾಗೂ ಡಿವೈಎಸ್ಪಿ ನ್ಯಾಮಗೌಡ, ಸಿಪಿಐ ಅಲಿಸಾಬ್, ಪಿಎಸ್‌ಐ ಅಂಬ್ರಿಷ್ ವಾಗ್ಮೋಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net