ಶಾಸಕ ವೀರೇಂದಪಪ್ಪಿ ನಿವಾಸದ ಮೇಲೆ ದಾಳಿ,ಸಿಕ್ಕಿಂನಲ್ಲಿ ವಶಕ್ಕೆ?

ctd puppi
Published on

ಚಿತ್ರದುರ್ಗ:ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರ ಚಳ್ಳಕೆರೆ ನಗರದ ನಿವಾಸ,ಕಚೇರಿ ಮೇಲೆ ಶುಕ್ರವಾರ ಬೆಳ್ಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ 6.30ರ ಹೊತ್ತಿಗೆ ಎಂಟು ಇನ್ನೋವಾ ಖಾಸಗಿ ಕಾರುಗಳಲ್ಲಿ ಧಾವಿಸಿರುವ ಬೆಂಗಳೂರು ವಿಭಾಗದ ಇಡಿ ಅಧಿಕಾರಿಗಳು ಚಳ್ಳಕೆರೆ ಹಳೇ ಟೌನ್‌ವೀರಭದ್ರ ಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಶಾಸಕರ ನಿವಾಸ ಮೇಲೆ ಹಾಗೂ ಶಾಸಕರ ಸಹೋ ದರರ ಕೆ.ಸಿ.ನಾಗರಾಜ್,ಕೆ.ಸಿ.ತಿಪ್ಪೇಸ್ವಾಮಿ ಹಾಗೂ ಸಂಬಂಧಿಸಿ ಹೊಸಮನೆ ಸ್ವಾಮಿ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖ ಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಆರ್‌ಪಿಎಫ್ ಯೋಧರು ಭದ್ರತೆ ಒದಗಿಸಿದ್ದಾರೆ. ದೇವಾಲಯದ ರಸ್ತೆಯಲ್ಲಿ,ಬ್ಯಾರಿಕೇಡ್‌ಗಳೊಂದಿಗೆ ಸ್ಥಳೀ ಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಚಳ್ಳಕೆರೆಯೊಂದಿಗೆ ಬೆಂಗಳೂರು, ಗೋವಾ, ರಾಜಸ್ಥಾನ ಮತ್ತಿತರ ಕಡೆಗಳಲ್ಲೂ ದಾಳಿಯಾಗಿದ್ದು,ದಾಳಿ ಸಂದರ್ಭದಲ್ಲಿ ಚಳ್ಳಕೆರೆ ನಿವಾಸ ದಲ್ಲಿ ಶಾಸಕರು ಇರಲಿಲ್ಲ. ಅವರನ್ನು ಸಿಕ್ಕಿಂನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಈ ಕುರಿತ ಶಾಸಕರ ಸಹೋದರ ಕೆ.ಸಿ.ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಿಂದ ಇಂದು ನಾನು ಬಂದಿದ್ದೇನೆ. ಶಾಸಕರೂ ಬರಲಿದ್ದಾ ರೆ.ಯಾವ ಕಾರಣಕ್ಕೆ ದಾಳಿ ನಡೆದಿದೆ ಗೊತ್ತಿಲ್ಲ.ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಎಂದಿದ್ದಾರೆ. ದಾಳಿ ಕುರಿತಂತೆ ಇಡಿ ಬೆಂಗಳೂರಿನ ಅಧಿ ಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದು,ಕೆ.ಸಿ.ವಿರೇಂದ್ರ ಮತ್ತು ಇತರರು ಸೇರಿ 30 ಕಡೆ ದಾಳಿ ನಡೆಸಲಾಗಿದೆ. ಚಿತ್ರದುರ್ಗ ಜಿಲ್ಲೆಯ 6ಕಡೆ, ಬೆಂ ಗಳೂರು ನಗರದ 10,ರಾಜಸ್ಥಾನ ಜೋದ್‌ಪುರದಲ್ಲಿ 3,ಹುಬ್ಬಳ್ಳಿಯಲ್ಲಿ 1,ಮುಂಬೈನಲಿ ್ಲ2 ಕಡೆ,ಗೋವಾದಲ್ಲಿ 5 ಕ್ಯಾಸಿ ಸೇರಿ ಎಂಟು ಕಡೆ

ಜೋದ್‌ಪುರದಲ್ಲಿ 3ಕಡೆ, ಹುಬ್ಬಳ್ಳಿ 1ಕಡೆ, ಮುಂಬೈನಲ್ಲಿ 2 ಕಡೆ ದಾಳಿ ನಡೆದಿದೆ. ಅಕ್ರಮ ಆನ್‌ಲೈನ್,ಆಫ್‌ಲೈನ್‌ಬೆಟ್ಟಿಂಗ್ ಪ್ರಕರಣ,ಕೆ.ಸಿ. ವಿರೇಂದ್ರ, ಸಹೋದರ ಕೆ.ಸಿ.ತಿಪ್ಪೇಸ್ವಾಮಿಗೆ ಸೇರಿದ ದುಬೈನ 3 ವ್ಯವಹಾರಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net