ಶಾಸಕ ರಾಜಾಸಿಂಗ್ ಗೆ ಪ್ರವೇಶ ನಿರ್ಬಂಧ !

bkt-19-11 (1)
ಶಾಸಕ ರಾಜಾಸಿಂಗ್
Published on

ಬಾಗಲಕೋಟೆ: ಜಿಲ್ಲೆಯ ಮುಧೋಳ ನಗರದಲ್ಲಿ ಸೆ. ೧೯ ರಂದು ಜನತಾ ರಾಜ ಗಣೇಶ ಮೂರ್ತಿ ಮೆರವಣಿಗೆ ಹಾಗೂ ವಿಸರ್ಜನೆಯಲ್ಲಿ ಭಾಗವಹಿಸಲಿದ್ದ ತೆಲಂಗಾಣದ ಗೋಶಾಮಹಲ್ ವಿಧಾನಸಭೆ ಕ್ಷೇತ್ರದ ಶಾಸಕ ರಾಜಾಸಿಂಗ್ ಠಾಕೂರ್ ಅವರಿಗೆ ಸೆ.೧೬ ರಿಂದ ೩ ತಿಂಗಳ ವರೆಗೆ ಬಾಗಲಕೋಟೆ ಜಿಲ್ಲಾದ್ಯಂತ ಪ್ರವೇಶ ನಿರ್ಬಂಽಸಿ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಆದೇಶ ಹೊರಡಿಸಿದ್ದಾರೆ.

ಮುಧೋಳ ನಗರದ ಜನತಾ ರಾಜ ಗಣೇಶ ಮೂರ್ತಿಯನ್ನು ೧೩ನೇ ದಿನವಾದ ಗುರುವಾರ ವಿಸರ್ಜನೆ ಕಾರ್ಯ ಹಮ್ಮಿಕೊಂಡಿದ್ದರು. ಇದರಲ್ಲಿ ಭಾವಹಿಸಲು ಸಂಘಟನೆಯವರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ತೆಲಂಗಾಣದ ಗೋಶಾಮಹಲ್ ಕ್ಷೇತ್ರದ ಶಾಸಕ ರಾಜಾಸಿಂಗ್ ಅವರಿಗೆ ಆವ್ಹಾನ ನೀಡಿದ್ದರು. ಆದರೆ ಕೋಮುಗಲಿಭೆ ಹಿನ್ನಲೆ ಮುಧೋಳ ನಗರವನ್ನು ಅತ್ಯಂತ ಸೂಕ್ಷ÷್ಮ ನಗರವಾಗಿದ್ದು, ರಾಜಾಸಿಂಗ್ ಅವರು ಉದ್ರೇಕಕಾರಿ ಹಾಗೂ ಪ್ರಚೋದನಾಕಾರಿ ಭಾಷಣದಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಂಭವ ಇದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಸಲ್ಲಿಸಿರುವ ವರದಿ ಆಧಾರದ ಮೇಲೆ ರಾಜಾಸಿಂಗ್ ಅವರು ಪ್ರವೇಶವನ್ನು ನಿರ್ಬಂಽಸಲಾಗಿದೆ ಎಂದು ಜಿಲ್ಲಾಽಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಹೈದ್ರಾಬಾದ್ ಗೆ ತೆರಳು ನೋಟಿಸ್ ತಲುಪಿಸಿದ ಪೊಲೀಸರು :
ರಾಜಾಸಿಂಗ್ ಅವರಿಗೆ ೩ ತಿಂಗಳು ಕಾಲ ಬಾಗಲಕೋಟೆ ಜಿಲ್ಲಾದ್ಯಂತ ಪ್ರವೇಶ ನಿರ್ಬಂಽಸಿರುವ ಬಗ್ಗೆ ಜಿಲ್ಲೆಯ ಪೊಲೀಸರು ಹೈದ್ರಾಬಾದ್‌ಗೆ ತೆರಳಿ ಸ್ವತಃ ಅವರಿಗೆ ನೋಟಿಸ್ ತಲುಪಿಸಿದ್ದಾರೆ. ನೀವು ಮುಧೋಳದ ಗಣೇಶ ಮೆರವಣಿಗೆಯಲ್ಲಿ ಭಾಗವಹಿಸಲು ಬರಬೇಡಿ ಎಂದು ತಿಳಿಸಿದ್ದಾರೆ.
೨೦೧೫ರಲ್ಲಿ ಮುಧೋಳ ನಗರದ ಜನತಾ ರಾಜ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ದೊಡ್ಡಮಟ್ಟದಲ್ಲಿ ಕೋಮುಗಲಿಭೆ ಉಂಟಾಗಿತ್ತು. ೯.೪೬ ಕೋಟಿ ರೂ. ಮೌಲ್ಯದ ಸೊತ್ತು ಸುಟ್ಟು ಭಸ್ಮವಾಗಿತ್ತು. ಈ ಬಗ್ಗೆ ೨೮ ಪ್ರಕರಣಗಳು ಎರಡು ಕೋಮಿನವರ ವಿರುದ್ಧ ದಾಖಲಾಗಿದ್ದು, ಇನ್ನೂ ಕೂಡ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಹೀಗಾಗಿ ಮುಧೋಳ ಅತ್ಯಂತ ಸೂಕ್ಷ÷್ಮ ಪ್ರದೇಶವಾಗಿದೆ. ಅಲ್ಲದೇ ರಾಜಾಸಿಂಗ್ ಅವರು ಪ್ರಚೋದನಾಕಾರಿ ಭಾಷಣ ಮಾಡಿರುವ ಬಗ್ಗೆ ರಾಜ್ಯದಲ್ಲೂ ಅವರ ವಿರುದ್ಧ ಪ್ರಕರಣಗಳು ಇವೆ. ಅವರೇ ಚುನಾವಣೆಯಲ್ಲಿ ಘೋಷಿಸಿರುವಂತೆ ಅವರ ವಿರುದ್ಧ ೮೦ ಕ್ರಿಮಿನಲ್ ಕೇಸ್ ಗಳಿವೆ. ಆದರೆ, ಆಂದ್ರಪ್ರದೇಶ, ತೆಲಂಗಾಣ ಹಾಗೂ ವಿವಿಧ ರಾಜ್ಯಗಳು ಸೇರಿದಂತೆ ಒಟ್ಟು ೧೦೫ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಇದ್ದು, ಇದರಲ್ಲಿ ೧೮ ಕೋಮು ಅಪರಾಧಗಳಿಗೆ ಸಂಬಂಽಸಿವೆ. ಈ ಕಾರಣಕ್ಕೆ ಅವರನ್ನು ೩ ತಿಂಗಳು ಕಾಲ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಽಸಲಾಗಿದೆ ಎಂದು ಜಿಲ್ಲಾಽಕಾರಿಗಳ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಶಾಸಕ ರಾಜಾಸಿಂಗ್ ಅವರನ್ನು ಗಣೇಶ ಮೆರವಣಿಗೆಗೆ ಕರೆಸದಂತೆ ಈ ಮೊದಲೇ ಸಂಘಟಿಕರಿಗೆ ತಿಳಿಸಲಾಗಿತ್ತು. ಆದರೂ ಅವರಿಗೆ ಆವ್ಹಾನಿಸಿದ್ದರಿಂದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ೩ ತಿಂಗಳು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಽಸಿ ಜಿಲ್ಲಾಽಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ನೋಟಿಸ್ ನ್ನು ಸ್ವತಃ ಹೈದ್ರಾಬಾದ್ ಗೆ ತೆರಳಿ ಮುಟ್ಟಿಸಲಾಗಿದೆ. ಹೀಗಾಗಿ ಅವರು ಮುಧೋಳದ ಗಣೇಶ ಮೆರವಣಿಯಲ್ಲಿ ಭಾಗವಹಿಸಲ್ಲ ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net