ಶಾಸಕ ಯತ್ನಾಳ್ ಹೇಳಿಕೆಗೆ ಖಂಡನೆ

Jonson Ghoode
Published on

ಬೀದರ್: ಒಳ ಮೀಸಲಾತಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಹೇಳಿಕೆಯನ್ನು ಮಾದಿಗ ಸಮಾಜದ ಮುಖಂಡ ಜಾನ್ಸನ್ ಘೋಡೆ ತೀವ್ರವಾಗಿ ಖಂಡಿಸಿದ್ದಾರೆ.

ಒಳ ಮೀಸಲಾತಿ ಜಾರಿಯಿಂದ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ಒಳ ಮೀಸಲಾತಿಯಿಂದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ನಷ್ಟವಾಯಿತು. ಬಸವರಾಜ ಬೊಮ್ಮಾಯಿ ಅವರ ಒಳ ಮೀಸಲಾತಿ ಕ್ರಮವನ್ನು ವಿರೋಧಿಸಿದ್ದೆ ಎಂದು ಯತ್ನಾಳ್ ನೀಡಿರುವ ಹೇಳಿಕೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯತ್ನಾಳ್ ಜಾತಿಗಳನ್ನು ಬಿಟ್ಟು ಬೇರೆ ವಿಷಯ ಮಾತನಾಡುವುದಿಲ್ಲ. ಈಗ ಒಳ ಮೀಸಲಾತಿಯನ್ನು ಕೆದಕಿದ್ದಾರೆ. ಬಿಜೆಪಿಯ ಅನೇಕರು ಪರಿಶಿಷ್ಟರ ಮತಗಳಿಂದಲೇ ಗೆದ್ದಿರುವುದನ್ನು ಯತ್ನಾಳ್ ಮರೆಯಬಾರದು ಎಂದು ಹೇಳಿದ್ದಾರೆ.

ಯತ್ನಾಳ್ ಕೂಡಲೇ ಪರಿಶಿಷ್ಟರ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net