ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಸನ್ಮಾನ

23rajesh3
Published on

ಚಾಮರಾಜನಗರ: ತಾಲೂಕಿನ ದೇಮಹಳ್ಳಿ ಗ್ರಾಮಕ್ಕೆ ಎಂಡಿಸಿಸಿ ಬ್ಯಾಂಕ್ ಚುನಾವಣೆಗೆ ಮತ ಕೇಳಲು ಆಗಮಿಸಿದ ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸೋಮವಾರ ಗ್ರಾಮಸ್ಥರು ಸನ್ಮಾನಿಸಿದರು.

ಈ ವೇಳೆ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಮೈಸೂರು-ಚಾಮರಾಜನಗರ ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾನು ಜಯಶೀಲನಾದರೆ, ತಾಲೂಕಿನ ಎಲ್ಲಾ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ ನನಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಚಾಮುಲ್ ನಿರ್ದೇಶಕ ರೇವಣ್ಣ, ಬಿ.ಕೆ.ರವಿಕುಮಾರ್, ಭೋಗಾಪುರ ಪುಟ್ಟು, ಸಂಘದ ಅಧ್ಯಕ್ಷ ಡಿ.ಎಸ್.ಶಿವನಾಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಶಿವಮಲ್ಲಪ್ಪ, ಸಹಕಾರ ಸಂಘದ ಸದಸ್ಯ ಶ್ರೀಕಂಠಸ್ವಾಮಿ, ಗುರುಪಾದಸ್ವಾಮಿ, ನಟರಾಜು, ಡಿ.ಕೆ.ಶಿವಕುಮಾರ್, ಗ್ರಾಮದ ಮುಖಂಡ ದೇಮಹಳ್ಳಿ ಶಿವಕುಮಾರ್, ಬಸವರಾಜಪ್ಪ, ನಂದೀಶ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net