ಶಾಸಕ ನಾಗೇಂದ್ರರ ನಾಲ್ಕು ಆಪ್ತರಿಗೆ ಇಡಿ ನೋಟೀಸ್

Published on

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬAಧಿಸಿದAತೆ ಬುಧವಾರ ನಗರಕ್ಕೆ ಆಗಮಿಸಿದ್ದ ಇಡಿ ಅಧಿಕಾರಿಗಳ ಬಳಿಗೆ ವಿಚಾರಣೆಗೆ ಆಗಮಿಸದ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತರಿಗೆ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿರುವ ನಾಗೇಂದ್ರ ಅವರ ನಾಲ್ವರು ಆಪ್ತರಿಗೆ ಇಡಿ ಅಧಿಕಾರಿಳು ನೋಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಪ್ರಕರಣಕ್ಕೆ ಸಂಬAಧಿಸಿದAತೆ ಬುಧವಾರ ಬೆಳ್ಳಂಬೆಳಗ್ಗೆ ನಗರಕ್ಕೆ ಆಗಮಿಸಿದ್ದ ೮ ಜನರ ಇಡಿ ಅಧಿಕಾರಿಗಳ ತಂಡ ಶಾಸಕ ನಾಗೇಂದ್ರ ಅವರ ಇಲ್ಲಿನ ನೆಹರೂ ಕಾಲೋನಿಯಲ್ಲಿನ ನಿವಾಸದಲ್ಲಿ ತಲಾಶ್ ನಡೆಸಿದರು. ಯಾರೂ ಇಲ್ಲದ್ದರಿಂದ ಮನೆಯಲ್ಲಿದ್ದ ಸಿಬ್ಬಂದಿಗಳನ್ನೇ ವಿಚಾರಣೆ ನಡೆಸಿದರು. ಕೆಲ ಮಾಹಿತಿಯನ್ನು ಕಲೆಹಾಕಿ, ಆಪ್ತ ಚೇತನ್, ಮಾಧ್ಯಮ ಸಲಹೆಗಾರ ನಾಗರಾಜ್ ಅವರನ್ನು ಮನೆಯಿಂದ ಕರೆತಂದು ಸುದೀರ್ಘವಾಗಿ ವಿಚಾರಣೆ ನಡೆಸಿದರು.
ಈ ವೇಳೆ ಶಾಸಕ ನಾಗೇಂದ್ರ ಅವರ ಇನ್ನು ಕೆಲ ಆಪ್ತರಿಗೆ ಇಡಿ ಅಧಿಕಾರಿಗಳು ದೂರವಾಣಿ ಕರೆ ಮಾಡಿ, ವಿಚಾರಣೆಗೆ ಬರುವಂತೆ ತಿಳಿಸಿದರೂ, ಕೆಲವರು ಊರಲ್ಲಿ ಇಲ್ಲ, ಬೇರೆ ಕಡೆ ಇದ್ದೇನೆ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿದ್ದ ಶಾಸಕ ನಾಗೇಂದ್ರ ಅವರ ಖಾಸಗಿ ಆಪ್ತ ಸಹಾಯಕ ವಿಜಯಕುಮಾರ್ ಸೇರಿದಂತೆ ನಾಲ್ವರು ಆಪ್ತರಿಗೆ ನೋಟೀಸ್ ನೀಡಿರುವ ಇಡಿ ಅಧಿಕಾರಿಗಳು, ಬೆಂಗಳೂರಿನ ಇಡಿ ಕಚೇರಿಗೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net