ಶಾಸಕ ನರೇಂದ್ರ ವಿವಿಧೆಡೆ ಮತ ಯಾಚನೆ

02 HANUR 2
Published on

ಹನೂರು : ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿಯ ಬೈಲೂರು, ಹುತ್ತೂರು ಹಾಗೂ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭಾನುವಾರ ಶಾಸಕ ಆರ್.ನರೇಂದ್ರ ಕಾರ್ಯಕರ್ತರೊಂದಿಗೆ ತೆರಳಿ ಮತ ಯಾಚಿಸಿದರು.
ಹೊಸಪೋಡು ಗ್ರಾಮದಲ್ಲಿ ಆಯೋಜಿಸಿದ್ಧ ಸಭೆಯಲ್ಲಿ ಅವರು ಮಾತನಾಡಿ, ಹನೂರು
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಇನ್ನಷ್ಟು ಅಭಿವೃದ್ಧಿ ಕಾಮಗಾರಿ ನಡೆಸುವ ಯೋಜನೆ ಇದೆ ಎಂದರು. ಕ್ಷೇತ್ರ ಹೆಚ್ಚು ವಿಸ್ತೀರ್ಣವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಎಸ್‌ಸಿಪಿ, ಟಿಎಸ್ಪಿ ಯೋಜನೆಯಡಿ ಕ್ಷೇತ್ರದ ಶೇ. 85ರಷ್ಟು ಸೋಲಿಗರ ಹಾಡಿಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗಿದೆ. ಇನ್ನು 1,800 ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಹಕ್ಕು ಪತ್ರ ನೀಡಲಾಗಿದೆ. 38 ಸಾವಿರ ಜನರಿಗೆ ಗ್ಯಾಸ್ ವಿತರಿಸಲಾಗಿದೆ ಎಂದರು.
ಮನೆ ಮಂಜೂರು:
ಜತೆಗೆ ಸಿದ್ದರಾಮಯ್ಯ ಮ.ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಈ ಭಾಗದ ಬೇಡಗಂಪಣ ಸಮುದಾಯದ ಜನರು ಮನೆ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಈ ದಿಸೆಯಲ್ಲಿ 2 ಹಂತದಲ್ಲಿ 1,550 ಮನೆ ಮಂಜೂರು ಮಾಡಲಾಗಿದೆ ಎಂದರು.ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯ ಹರೀಶ್‌ಕುಮಾರ್, ಗ್ರಾಪಂ ಸದಸ್ಯರಾದ ಪಿ.ನಾಗಣ್ಣ, ಪುಟ್ಟವೀರನಾಯ್ಕ, ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು, ಟೌನ್ ಅಧ್ಯಕ್ಷ ಮಂಜೇಶ್, ಮುಖಂಡರಾದ ಗುರುಮಲ್ಲಪ್ಪ, ಜಗದೀಶ್, ಸಿದ್ದರಾಜು, ಚಂದ್ರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net