

ಮೈಸೂರು: ಸಹಕಾರ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ, ವರ್ಗಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿರುವ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ದಲಿತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಶೋಕ ವೃತದಲ್ಲಿ (ಬಲ್ಲಾಳ ವೃತ್ತ) ಜಿಟಿಡಿ ಭಾವಚಿತ್ರವನ್ನು ದಹಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಜಿಟಿಡಿ ಅವರು ಜಾತಿವಾದದ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಹೀಗಾಗಿ ಇವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಹಕಾರ ಕ್ಷೇತ್ರವನ್ನು ಯಾವ ಉದ್ದೇಶದಿಂದ ಸ್ಥಾಪನೆ ಆಗಿದೆ ಎಂದು ಜಿ.ಟಿ.ದೇವೇಗೌಡರಿಗೆ ಇನ್ನೂ ಅರ್ಥ ಮಾಡಿಕೊಂಡಿಲ್ಲ. ಅದು ಒಂದು ವರ್ಗಕ್ಕೆ ಸೀಮಿತ ಅಲ್ಲ. ಪ್ರತಿ ಬಡವನಿಗೂ ಅವಕಾಶ ಸಿಗಬೇಕು. ಈ ಕ್ಷೇತ್ರ ಎಲ್ಲರಿಗೂ ವಿಸ್ತಾರ ಆಗಬೇಕು ಎಂಬುದನ್ನು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು: ಸಹಕಾರ ಕ್ಷೇತ್ರದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಗೆ ಶಾಸಕ ಜಿ.ಟಿ.ದೇವೇಗೌಡ ವಿರೋಧಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಎಂಸಿಡಿಸಿಸಿ ಬ್ಯಾಂಕ್ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟರಿಗೆ ಸಹಕಾರ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರಾಗಲು ಮೀಸಲಾತಿ ನಿಗದಿ ಮಾಡಿದರೆ ಈ ಸಂಸ್ಥೆಗಳ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸದನದಲ್ಲಿ ಜಿ.ಟಿ.ದೇವೇಗೌಡ ಹೇಳಿಕೆ ನೀಡಿರುವುದು ಖಂಡನೀಯ.
ಈ ಸಮುದಾಯದವರು ರಾಷ್ಟ್ರಪತಿ, ಮುಖ್ಯಮಂತ್ರಿಯಾಗಿ, ಐಎಎಸ್, ಐಪಿಎಸ್‌ಯಾಗಿ ಆಡಳಿತ ನಡೆಸಿದ್ದಾರೆ. ಇದನ್ನು ಅರಿಯದ ಜಿಟಿಡಿ ಹೇಳಿಕೆ ಜಾತಿ ವ್ಯವಸ್ಥೆ, ವರ್ಣಾಶ್ರಮ ಪದ್ಧತಿ ಜಾರಿಯಲ್ಲಿಡುವ ಹುನ್ನಾರವಾಗಿದೆ ಎಂದು ಕಿಡಿಕಾರಿದರು.
ಮುಖಂಡರಾದ ಎಸ್.ರಾಜೇಶ್, ಎಸ್.ಎ.ರಹೀಂ, ಶಿವಶಂಕರ್‌ಮೂರ್ತಿ, ಸುನೀಲ್‌ಕುಮಾರ್, ಡಿ.ಜಿ.ಕೇಶವ, ಓಂಕಾರ್, ರವಿ, ಧನಪಾಲ್‌ರಂಗಸ್ವಾಮಿ, ರಾಜಶೇಖರ್ ಇನ್ನಿತರರಿದ್ದರು